ಕರ್ನಾಟಕಪ್ರಮುಖ ಸುದ್ದಿ

ಮೂವರು ವೈದ್ಯರು, ಅಧೀಕ್ಷಕರ ಅಮಾನತು

ಬೆಂಗಳೂರು (ಪ್ರಮುಖ ಸುದ್ದಿ) ಜೂನ್ 5 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಜಿಲ್ಲೆಗಳ ಮೂವರು ವೈದ್ಯರು ಸೇರಿದಂತೆ ಓರ್ವ ಅಧೀಕ್ಷಕರನ್ನು ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಹಾವೇರಿ ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಟಿ. ನಾಗರಾಜ ನಾಯಕ್ ಅವರನ್ನು ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ಇವರನ್ನು ಸಹ ಹಣ ದುರುಪಯೋಗ ಆರೋಪದ ಮೇಲೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ವಿಜಯಪುರ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ. ಸುರೇಖ ಹಡಗಲಿ ಮತ್ತು ಕಚೇರಿ ಅಧೀಕ್ಷಕರಾದ ಶ್ರೀಮತಿ ನಸೀಮಾ ಬೇಗಂ ಹೈದರಾಬಾದ್ ಅವರುಗಳನ್ನು ಭಷ್ಟ್ರಾಚಾರ ನಿಗ್ರಹದಳ ಟ್ರಾಪ್ ಪ್ರಕರಣದಲ್ಲಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

-ಎನ್.ಬಿ.ಎನ್.

Leave a Reply

comments

Related Articles

error: