ಮೈಸೂರು

ಗೊಂಬೆ ರಾವಣ ನಾಟಕ ಪ್ರದರ್ಶನ

ಹುಣಸೂರಿನ ಟ್ಯಾಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಸಂಜೆ ಕಲಾಮಂದಿರದ ಭೂಮಿಗೀತದಲ್ಲಿ ‘ಗೊಂಬೆ ರಾವಣ’ ನಾಟಕ ಪ್ರದರ್ಶಿಸಿದರು.

ಈ ನಾಟಕವನ್ನು ಗಜಾನನ ಶರ್ಮ ನಿರ್ದೇಶಿಸಿದ್ದರು. ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ವರ್ತಿಸಬೇಕು. ದೊಡ್ಡವರ ರೀತಿ ವರ್ತಿಸಬಾರದು ಎಂಬುದನ್ನು ಈ ನಾಟಕ ರಾಮಾಯಣದ ವಿವಿಧ ಪಾತ್ರಗಳ ಮೂಲಕ ಮನಮುಟ್ಟುವಂತೆ ತೋರಿಸಿದೆ.

ಮಕ್ಕಳು ದೊಡ್ಡವರ ವಿಷಯದಲ್ಲಿ ಮೂಗು ತೂರಿಸಬಾರದು. ಇದರಿಂದ ಅವಘಡಗಳು ಜಾಸ್ತಿ. ಎಲ್ಲ ವಿಷಯಗಳಲ್ಲೂ ಆಸಕ್ತಿ ತೋರಿಸುವುದು ಮಕ್ಕಳ ಗುಣ. ಅವರನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗುವುದು ಹೆತ್ತವರು, ಹಿರಿಯರ ಕರ್ತವ್ಯ ಎಂಬುದು ಈ ನಾಟಕದ ಸಾರಾಂಶವಾಗಿದೆ.

ಕಾರ್ತಿಕ್ ಉಪಮನ್ಯು ಎಸ್. ನಾಟಕವನ್ನು ನಿರ್ದೇಶಿಸಿದ್ದು, ಶಶಿಕಲಾ ಸಂಯೋಜಿಸಿದ್ದಾರೆ.

Leave a Reply

comments

Related Articles

error: