ಲೈಫ್ & ಸ್ಟೈಲ್

ಉಪವಾಸಕ್ಕೂ ಖರ್ಜೂರಕ್ಕೂ ಏನು ಸಂಬಂಧ…ಇಲ್ಲಿದೆ ರಹಸ್ಯ!

ರಮ್ಜಾನ್  ಸಮಯದಲ್ಲಿ ಮುಸ್ಲಿಂ ಬಾಂಧವರು ಪ್ರತಿದಿನ ಖರ್ಜೂರ ಸೇವಿಸುತ್ತಾರೆ. ಪೈಗಂಬರ್ ಹಜರತ್ ಮಹಮ್ಮದ್ ಅವರ ಪ್ರೀತಿಯ ಹಣ್ಣು ಖರ್ಜೂರವಾಗಿತ್ತಂತೆ. ಅವರು ಖರ್ಜೂರವನ್ನಷ್ಟೇ ಸೇವಿಸಿ ಉಪವಾಸ ಅಚರಿಸುತ್ತಿದ್ದರಂತೆ. ಅದರಿಂದ ಈಗಲೂ ಸಹ ಖರ್ಜೂರವನ್ನು ಸೇವಿಸಿಯೇ ಉಪವಾಸ ವ್ರತ ಕೈಗೊಳ್ಳಲಾಗುತ್ತದೆ.

ಖರ್ಜೂರ ಸೇವನೆ ಯಾಕೇ?  ದಿನವಿಡೀ ಉಪವಾಸವಿರುವುದರಿಂದ ದೇಹದಲ್ಲಿನ ಶಕ್ತಿ ಕಡಿಮೆಯಾಗಲಿದೆ. ಉಪವಾಸ ಮುಗಿಸುತ್ತಲೇ ಖರ್ಜೂರ ಸೇವಿಸಿದರೆ ಶರೀರಕ್ಕೆ ಕೂಡಲೇ ಶಕ್ತಿ ದೊರೆಯಲಿದೆ. ಇದಲ್ಲದೇ ಇಫ್ತಾರ್ ಸಮಯದಲ್ಲಿ ಸೇವಿಸುವ ಇತರ ಪದಾರ್ಥಗಳೂ ಕೂಡಾ ಸುಲಭವಾಗಿ ಪಚನವಾಗಲು ಖರ್ಜೂರ ಸಹಕರಿಸಲಿದೆ.  ದಿ ಅಮೇರಿಕನ್ ನ್ಯೂಟ್ರೀಶನ್ ಸೆಂಟರ್ ನ ಸಂಶೋಧನೆಯ ಪ್ರಕಾರ ಒಂದು ದಿನಕ್ಕೆ ಅವಶ್ಯವಿರುವ  ಫಾಯ್ಬರ್ಸ್ ಖರ್ಜೂರ ತಿನ್ನುವುದರಿಂದ ಶರೀರಕ್ಕೆ ಸಿಗಲಿದೆಯಂತೆ. ಅಷ್ಟೇ ಅಲ್ಲದೇ ಶರೀರವನ್ನು ಆರೋಗ್ಯಯುತವಾಗಿಡುವ ನ್ಯೂಟ್ರಿಯಾಂಟ್ಸ್ ಕೂಡ ಇದೆಯಂತೆ.  ಉಪಯೋಗಗಳು:

*ಖರ್ಜೂರದಲ್ಲಿ ಗ್ಲುಕೋಸ್ ಫ್ರಕ್ಟೋಸ್ ಗಳಿದ್ದು ಶರೀರಕ್ಕೆ ಶಕ್ತಿ ಸಿಗಲಿದೆ.

*ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಹೇರಳವಾಗಿದೆ. ಇದರಿಂದ ದಿನವಿಡೀ ಶರೀರದಲ್ಲಿ ಶಕ್ತಿಯಿರುವಂತೆ ನೋಡಿಕೊಳ್ಳಲಿದೆ.

*ಇದರಲ್ಲಿ ಫಾಯ್ಬರ್ಸ್ ಗಳಿದ್ದು ಪದೇ ಪದೇ ಹಸಿವಾಗುವುದನ್ನು ನಿಯಂತ್ರಿಸುತ್ತದೆ. ಇದರಿಂದ ಉಪವಾಸದ ಹೊರತಾಗಿ ಉಳಿದ ದಿನಗಳಲ್ಲಿಯೂ ಸೇವಿಸುವುದು ಲಾಭದಾಯಕವಾಗಿದೆ.

*ಖರ್ಜೂರ ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ರೋಗಗಳಿಂದ ದೂರವಿರಿಸುತ್ತದೆ.

*ಇದರಲ್ಲಿರುವ ವಿಟಾಮಿನ್ ಬಿ6 ಮೆದುಳಿನ ಶಕ್ತಿಯನ್ನು ವೃದ್ಧಿಸುತ್ತದೆ. ಉಪವಾಸ ಸಮಯದಲ್ಲಿನ ಉದಾಸೀನತೆಯನ್ನು ತೊಲಗಿಸುತ್ತದೆ.

* ಇದರಲ್ಲಿರುವ ಅಲ್ಕೆಲಾಯಿಟ್ಸ್ ಅಂಶವು ರಕ್ತಸಂಚಾರವನ್ನು ವೃದ್ಧಿಸುತ್ತದೆ. ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದ ರಕ್ಷಿಸುತ್ತದೆ.

*ಇದರಲ್ಲಿ ಫಾಯ್ಬರ್ಸ್ ಅಂಶ ಹೇರಳವಾಗಿದ್ದು, ಉಪವಾಸ ಸಂದರ್ಭ ಖಾಲಿಹೊಟ್ಟೆಯಲ್ಲಿರುವುದರಿಂದ ಉಂಟಾಗುವ ಎಸಿಡಿಟಿಯನ್ನು ಶಮನಗೊಳಿಸಲಿದೆ.

*ಇದರಲ್ಲಿರುವ ಕಬ್ಬಿಣದ ಅಂಶದಿಂದ ಹಿಮೋಗ್ಲೋಬಿನ್ ಹೆಚ್ಚಲಿದೆ. ಇದರಿಂದ ಉಪವಾಸದ ಸಂದರ್ಭ ನಿಶ್ಯಕ್ತಿ ಕಾಡದು.

ಈ ಎಲ್ಲ ಅಂಶಗಳನ್ನು ಹೊಂದಿರುವ ಖರ್ಜೂರ ಉಪವಾಸದ ಸಮಯಕ್ಕೆ ಹೇಳಿ ಮಾಡಿಸಿದಂತಹ ಹಣ್ಣಾಗಿದೆ. (ಎಸ್.ಎಚ್)

Leave a Reply

comments

Related Articles

error: