ಪ್ರಮುಖ ಸುದ್ದಿಮೈಸೂರು

ಮಹಿಳಾ ಕುಸ್ತಿ :ಪ್ರತಿ ವಿಭಾಗದಲ್ಲೂ ಗುರುತಿಸಿಕೊಂಡಿರುವ ಆಳ್ವಾಸ್

sports-webದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನ ಡಿ.ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 60ಕೆ.ಜಿ.ವಿಭಾಗದಲ್ಲಿ ದಕ್ಷಿಣ ಕನ್ನಡದ ಮೂಡಬಿದಿರೆಯ ಆಳ್ವಾಸ್ ನ ಆತ್ಮಶ್ರೀ ಪ್ರಥಮ ಸ್ಥಾನ ಪಡೆದರೆ ಅದೇ ಕಾಲೇಜಿನ ಸಹನಾ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. 55ಕೆಜಿ ವಿಭಾಗದಲ್ಲಿ ಗದಗನ ಶಾಹಿದಾ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಳಗಾವಿಯ ಸುವರ್ಣಾ ಪಾಟೀಲ್ ದ್ವಿತೀಯ ಸ್ಥಾನ ಹಾಗೂ ಆಳ್ವಾಸ್ ನ ಹರ್ಷಿತಾ ತೃತೀಯ ಸ್ಥಾನ ಗಳಿಸಿದರು. 48ಕೆಜಿ ವಿಭಾಗದಲ್ಲಿ ಬಶಿರಾ ಮತ್ತು ಜ್ಯೋತಿ ಎಂ.ಗಾಡಿ ಫೈನಲ್ ತಲುಪಿದ್ದಾರೆ. ಆಳ್ವಾಸ್ ನ ಅಪರ್ಣಾ ಮತ್ತು ಮಮತಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

53ಕೆಜಿ ವಿಭಾಗದಲ್ಲಿ ಆಳ್ವಾಸ್ ನ ಲಕ್ಷ್ಮಿ, ಲೀನಾ ಸಿದ್ಧಿ ಫೈನಲ್ ತಲುಪಿದ್ದು ಮೈಸೂರಿನ ಶಿವಾನಿ ಆಳ್ವಾಸ್ ನ ಮಹಾಲಕ್ಷಿ ತೃತೀಯ ಸ್ಥಾನ, 63ಕೆಜಿ ವಿಭಾಗದಲ್ಲಿ ಆಳ್ವಾಸ್ ನ ಸಾವಕ್ಕ ಮತ್ತು ಪೂಜಾ ಫೈನಲ್ ತಲುಪಿದ್ದು, ಮಂಡ್ಯದ ಭೂಮಿಕಾ ಮತ್ತು ಆಳ್ವಾಸ್ ನ ನಾಗರತ್ನಾ ತೃತೀಯ ಸ್ಥಾನಗಳಿಸಿದ್ದಾರೆ.

69ಕೆಜಿ ವಿಭಾಗದಲ್ಲಿ ಆಳ್ವಾಸ್ ನ ಎಂ.ಡಿ.ಪವಿತ್ರಾ, ಶಿವಮೊಗ್ಗಾದ ಸಿ.ದೀಪಾ ಫೈನಲ್ ತಲುಪಿದ್ದು, ಮೈಸೂರಿನ ಎಂ.ಕವನಾ, ಮಹಾರಾಷ್ಟ್ರದ ಪ್ರತೀಕ್ಷಾ ತೃತೀಯ ಸ್ಥಾನ ಪಡೆದಿದ್ದಾರೆ. 75ಕೆಜಿ ವಿಭಾಗದಲ್ಲಿ ಆಳ್ವಾಸ್ ನ ಅನುಶ್ರೀ, ಹರಿಯಾಣದ ಶ್ರಾವಣಿ ಫೈನಲ್ ತಲುಪಿದ್ದು, ಮಂಡ್ಯದ ಕೆ.ಹೆಚ್.ರಕ್ಷಿತಾ ಆಳ್ವಾಸ್ ನ ಕೆ.ಆರ್.ಪ್ರಿಯಾಂಕಾ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಪಂದ್ಯಾಟದ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಕೇಸರಿ ಪೇಟ ತೊಟ್ಟು ಎಲ್ಲರ ಗಮನ ಸೆಳೆದರು. ಉತ್ತಮ ಮಹಿಳಾ ಕುಸ್ತಿ ಪಟು ಪ್ರಶಸ್ತಿಯೊಂದಿಗೆ ಟ್ರೋಫಿಯನ್ನು ಗದಗಿನ ಶಾಹಿದಾ ಅವರಿಗೆ ನೀಡಲಾಯಿತು. ವಿಜೇತರಿಗೆ ಪ್ರಶಸ್ತಿಪತ್ರ ನೀಡಿ ಪದಕ ತೊಡಿಸಲಾಯಿತು.

Leave a Reply

comments

Related Articles

error: