ಕರ್ನಾಟಕಮೈಸೂರು

‘ರಾಜ ದರ್ಬಾರ್’ ನೃತ್ಯ ರೂಪಕದಲ್ಲಿ ಮೈಸೂರಿನ ಸಂಸ್ಕೃತಿ ಅನಾವರಣ

s1000017-web

ಮೈಸೂರು ದಸರಾ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಜಗನ್ಮೋಹನ ಅರಮನೆಯ ವೇದಿಕೆಯಲ್ಲಿ ಮಲ್ಲಿಗೆ ಕವಿ ಕೆ.ಎಸ್.ನ. ಒಂದಿರುಳು ಕನಸಿನಲ್ಲಿ, ದೀಪವು ನಿನ್ನದೇ ಗಾಳಿಯೂ ಹಾಡುಗಳು. ಕುವೆಂಪುರವರ ಬಾ ಇಲ್ಲಿ ಸಂಭವಿಸು ಕವನಗಳಿಗೆ ಧ್ವನಿ ನೀಡಿದವರು ಚಾಮರಾಜನಗರದ ಮಹೇಂದ್ರ ಮತ್ತು ತಂಡ. ಸುಶ್ರಾವ್ಯವಾಗಿ ಹಾಡಿದ ಗಾನದ ಮೋಡಿಗೆ ಕನ್ನಡ ಕಿಚ್ಚು ಹಚ್ಚಿದರು. ಯೇಸುದಾಸರ ಸ್ವಾಮಿ ಅಯ್ಯಪ್ಪನ ಸುಪ್ರಸಿದ್ಧ ಗೀತೆ ಹರಿಹರಾಸನಂ ಸ್ವಾಮಿ… ಗೀತೆಯೂ ಭಕ್ತಿ ಲೋಕಕ್ಕೆ ಸೆಳೆದೊಯ್ಯಿತು. ಮಹೇಂದ್ರ ಅವರಿಗೆ ಹಂಸಿನಿ, ತಬಲ ವಿನಯ್, ರಿದಂ ಗುರುದತ್ತ್. ಕೀ ಬೋರ್ಡ್ ಅಲ್ಲಿ ಷಣ್ಮುಖ ಸಾಥ್ ನೀಡಿದರು.

ಮೈಸೂರಿನ ಶಿವಕುಮಾರ್ ಹಿಂದೂಸ್ತಾನಿ ಸಂಗೀತದ ಕಿರಾನ-ಘರಾನದ ಜೋಗ್ ರಾಗಕ್ಕೆ  ತಬಲ – ಪಂ.ರಮೇಶ್ ಬನ್ನೂರು, ಪಂ. ಜುಮ್ಮನಗೌಡ ಪಾಟೀಲ್ ಹಾಗೂ ಜಗದೀಶ್ ಮತ್ತು ಮಂಜುನಾಥ್ ತಂಬೂರಿಯೊಂದಿಗೆ ಜೊತೆಯಾದರು.

ಬೆಂಗಳೂರಿನ ಕೌಶಲ್ಯ ಮತ್ತು ತಂಡದವರ ಮುಕುಂದ ಲೀಲಾ ಭಾಗ ಎರಡು ನೃತ್ಯ ರೂಪದಲ್ಲಿ ಪುರುಷೋತ್ತಮ ಶ್ರೀಕೃಷ್ಣನ ವಿವಿಧ ಲೀಲೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ವಿರಾಟ ಉಗ್ರರೂಪ ನರಸಿಂಹ, ವಾಮನ, ಶತವತಾರದ ವಿಷ್ಣು, ಭಗವದ್ಗೀತೆಯ ಬೋಧನೆ, ಗೋಪಿಕೆಯೊಂದಿಗೆ ಚೆಲ್ಲಾಟ, ಮಾತೆ ಯಶೋಧೆಯೊಂದಿಗೆ ಹುಡುಗಾಟ ನೃತ್ಯ ರೂಪಕವು ವೀಕ್ಷಕರನ್ನು ದ್ವಾಪುರಯುಗಕ್ಕೆ ಕರೆದೊಯ್ಯಿತು.  24 ಜನರ ತಂಡವು ಇಡೀ ವೇದಿಕೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದರು.

ಮೈಸೂರಿನ ಬ್ರಹ್ಮವಿದ್ಯಾ ಪ್ರತಿಷ್ಠಾನದ ‘ರಾಜ ದರ್ಬಾರ್ ನೃತ್ಯ’ವು ಮೈಸೂರು ಸಂಸ್ಥಾನದ ಇತಿಹಾಸವನ್ನು ಪುನರ್ ಅನಾವರಣಗೊಳಿಸಿದಂತೆ ಭಾಸವಾಯಿತು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕೋತ್ಸವದ ಘಳಿಗೆಯನ್ನು ‘ರಾಜಪುಷ್ಪಾಂಜಲಿ –ರಾಗ’  ಮೂಲಕ ಡಾ.ರಾಧಿಕಾ ನಂದಕುಮಾರ್ ಕಣ್ಣಿಗೆ ಕಟ್ಟುವಂತೆ ನಡೆಸಿದ ನೃತ್ಯ ರೂಪಕವು ಪ್ರೇಕ್ಷಕರ ಮೈ ರೋಮಾಂಚನಗೊಳಿಸಿತ್ತು. ಮೈಸೂರಿಗೂ ತನ್ನದೇ ಆದ ಸಾಂಸ್ಕೃತಿಕ ಶೈಲಿಯಿದೆ. ರಾಜರು ರಾಜ್ಯದ ಸಾಂಸ್ಕೃತಿಕ ನೆಲೆಯಲ್ಲಿ ಸುಖಶಾಂತಿ ನೆಮ್ಮದಿ ಕಾಣುತ್ತಿದ್ದರು ಎನ್ನುವುದನ್ನು ಅತ್ಯಂತ ಮನಮೋಹಕವಾಗಿ ಪ್ರದರ್ಶಿಸಿದರು.

ವಿದ್ವಾನ್. ರಾ.ಸತ್ಯನಾರಾಯಣ ಮೀಲ್ ಚೇರ್ನಲ್ಲಿಯೇ ಬಂದು ಕಾರ್ಯಕ್ರಮಗಳನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು.

ದಸರಾ ಉಪಸಮಿತಿಯ ವೇದಿಕೆಯ ಉಸ್ತುವಾರಿ ಅಧಿಕಾರಿ ಲೋಕೇಶ್ .ಎಂ.ಎಸ್. ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು. ಓಹಿಲಾ ನಿರೂಪಿಸಿದರು.

Leave a Reply

comments

Related Articles

error: