ಮೈಸೂರು

ಪ್ರೇಕ್ಷಕರ ರಂಜಿಸಿದ ಕೊಳಲು ವಾದನ

ಮೈಸೂರಿನಲ್ಲಿ ದಸರಾ ಆಚರಣೆಯ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಬ್ಬದಂಗವಾಗಿ ನಗರದ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬುಧವಾರದಂದು ಗಾನಭಾರತಿ ಆಡಿಟೋರಿಯಂನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹರಿಹರದ ಜಡೆಯಪ್ಪ ತಂಡ ‘ಡೊಳ್ಳು ಕುಣಿತ’ ಮತ್ತು ತೆಲಂಗಾಣದ ಕಲಾವಿದರು ‘ಬೋನಾಟು ಬದುಕನ್’ ಎಂಬ ಆದಿವಾಸಿ ನೃತ್ಯ ಪ್ರದರ್ಶಿಸಿದರು. ಕೃತಿಕಾ ಜೆಂಗಿನಮಠ ನೀಡಿದ ಕೊಳಲು ವಾದನ ಕಾರ್ಯಕ್ರಮ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಆಕೆಯ ಸಹೋದರ ಕಾರ್ತಿಕೇಯ ಜೆಂಗಿನಮಠ ತಬಲದಲ್ಲಿ ಸಾಥ್ ನೀಡಿದರು. ಮೈಸೂರಿನ ಹರ್ಷಿತಾ ರಾಜು ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದಳು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರೆಲ್ಲರಿಗೂ ಸ್ಮರಣಿಕೆ ನೀಡಲಾಯಿತು. ಗಾನಭಾರತಿಯಲ್ಲಿ ಅ.9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 

Leave a Reply

comments

Related Articles

error: