ಮೈಸೂರು

ನಿವೇಶನ ಜಾಗಕ್ಕೆ ನುಗ್ಗಿ ಗೂಂಡಾ ವರ್ತನೆ : ದೂರು

ಮೈಸೂರು,ಜೂ.6:- ನಿವೇಶನ ಜಾಗಕ್ಕೆ ನುಗ್ಗಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ನಜರ್ ಬಾದ್ ಠಾಣೆಯಲ್ಲಿ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದಾರೆ

ರಾಧ  ಎಂಬವರೇ ದೂರು ನೀಡಿದವರಾಗಿದ್ದಾರೆ. ರಾಜ್ ಕುಮಾರ್ ರಸ್ತೆ ರಾಘವೇಂದ್ರನಗರದಲ್ಲಿ  ಒಂದು ಅಂಗಡಿ ಮಳಿಗೆಯನ್ನು ಕಟ್ಟುತ್ತಿದ್ದು, ಸದರಿ ಜಾಗಕ್ಕೆ ಜೂ.5 ರಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ನಿವೇಶನ ಪಕ್ಕದಲ್ಲಿರುವ ಆರೋಪಿ ಯೋಗೀಶ್ ಮತ್ತು ತಿಮ್ಮರಾಯಶೆಟ್ಟಿ ಎಂಬುವವರುಗಳು ಸುಮಾರು 15 ಜನರೊಂದಿಗೆ ಅಕ್ರಮವಾಗಿ ಪಿರ್ಯಾದುದಾರರ ನಿವೇಶನ ಜಾಗಕ್ಕೆ ಅತಿಕ್ರಮ ಪ್ರವೇಶಮಾಡಿ, ಮಳಿಗೆ ನಿರ್ಮಿಸಲು  ಹಾಕಿದ್ದ ಕಾಲಾವಧಿಯನ್ನು ಕಿತ್ತುಹಾಕಿ ಗೂಂಡಾ ವರ್ತನೆಯನ್ನು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಡವನ್ನು ಕಟ್ಟಬೇಕಾದರೆ ತಮಗೆ ಹಣ ನೀಡಬೇಕೆಂದು ಹಣವನ್ನು ನೀಡದಿದ್ದ ಪಕ್ಷದಲ್ಲಿ ಕೆಲಸವನ್ನು ಮುಂದುವರೆಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: