ನಮ್ಮೂರುಮೈಸೂರು

ಇಂಜಿನಿಯರ್ಸ್ ದಿನಾಚರಣೆ

ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕವಾಗಿ ಕೌಶಲ್ಯ ವೃದ್ಧಿಸಿಕೊಳ್ಳುವುದರಿಂದ ಉದ್ಯೋಗ ಕೇತ್ರದ ನಿರೀಕ್ಷೆ ಮುಟ್ಟಬಹುದು ಎಂದು ಶಿವಮೊಗ್ಗ ವಿವಿಯ ಉಪಕುಲಪತಿ ಡಾ.ಕೆ.ಗೋವಿಂದ ಗೌಡ ತಿಳಿಸಿದರು.
ಅವರು ನಗರದ ಬನ್ನೂರು ರಸ್ತೆಯಲ್ಲಿರುವ ಎ.ಟಿ.ಎಂ.ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಇಂಜಿನಿಯರ್ಸ್ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನಲ್ಲಿ ಕಲಿಯುವುದು ಔದ್ಯೋಗಿಕ ಕ್ಷಮತೆಯನ್ನು ವಿಸ್ತರಿಸಿದರೆ ಪ್ರಚಲಿತ ವಿದ್ಯಮಾನಗಳ ಅರಿವಿನೊಂದಿಗೆ ಸಾಮಾಜಿಕ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅತಿ ಅವಶ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಲ್. ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಇಂಜಿನಿಯರ್ಸ್ ದಿನಾಚರಣೆಯಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ವೀರೇಂದ್ರ ಕುಮಾರ್ ಅತಿಥಿಗಳನ್ನು ಸನ್ಮಾನಿಸಿದರು. 7ನೇ ಸೆಮಿಸ್ಟರ್ ಶ್ರೀಚೈತ್ರ ವಿದ್ಯಾರ್ಥಿಗಳ ವಾರ್ಷಿಕ ಚಟುವಟಿಕೆ ವರದಿ ವಾಚಿಸಿದರು.

Leave a Reply

comments

Related Articles

error: