ದೇಶಪ್ರಮುಖ ಸುದ್ದಿ

ಕೃಷಿ ಭಾಗ್ಯದಿಂದ 1,54,775 ಫಲಾನುಭವಿಗಳಿಂದ ಅನುಕೂಲ

ಬೆಂಗಳೂರು, ಜೂನ್ 6 : ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆಯ ಪ್ರಯೋಜನವನ್ನು ಕಳೆದ 3 ವರ್ಷಗಳಿಂದ ಒಟ್ಟು 1,54,775 ಫಲಾನುಭವಿಗಳು ಪಡೆದುಕೊಂಡಿರುತ್ತಾರೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಹೆಚ್.ಎಂ. ರೇವಣ್ಣ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಫಲಾನುಭವಿಗಳಲ್ಲಿ ಕೃಷಿ ಭಾಗ್ಯ ಕಾರ್ಯಕ್ರಮಡಿ 1,42,639 ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯ ಒಗ್ಗೂಡುವಿಕೆ ಕಾರ್ಯಕ್ರಮದಡಿ -12,136 ಫಲಾನುಭವಿಗಳಿದ್ದಾರೆ. 95,681 ಸಣ್ಣ ಮತ್ತು 59,094 ಅತಿ ಸಣ್ಣ ರೈತರಿದ್ದಾರೆ. ಕೃಷಿಭಾಗ್ಯ ಯೋಜನೆಯಡಿ ಇಲ್ಲಿಯವರೆಗೆ 1406.09 ಕೋಟಿ ಅನುದಾನವನ್ನು ಭರಿಸಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

-ಎನ್.ಬಿ.ಎನ್.

Leave a Reply

comments

Related Articles

error: