ದೇಶಪ್ರಮುಖ ಸುದ್ದಿ

ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಕುಸಿತ

15th_gold_1428839f_2596676f-webನವದೆಹಲಿ: ಚಿನ್ನಪ್ರಿಯರಿಗೊಂದು ಸಂತಸದ ಸುದ್ದಿ ಇದೆ ನೋಡಿ. ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. ಬುಧವಾರ ಒಂದೇ ದಿನದಲ್ಲಿ 730 ರು. ಅಷ್ಟು ಕಡಿಮೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 30,520 ರು.ಗೆ ಇಳಿದಿತ್ತು.

ಅಮೆರಿಕಾದಲ್ಲಿ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಹೂಡಿಕೆದಾರರು ಹಳದಿ ಲೋಹದಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,750 ರು. ಕುಸಿತಕಂಡಿದ್ದು, ನಿನ್ನೆ ಬೆಳ್ಳಿ ದರ 43,250 ರು, ಆಗಿತ್ತು.

ಮುಂದಿನ ದಿನಗಳಲ್ಲೂ ಅಮೆರಿಕಾದಲ್ಲಿ ಬಡ್ಡಿ ದರ ಏರಿಕೆಯಾದರೆ ಚಿನ್ನದ ಬೆಲೆ ಮತ್ತಷ್ಟು ಕುಸಿಯಲಿದೆ.

Leave a Reply

comments

Related Articles

error: