ಮೈಸೂರು

ಪರಿಸರ ಜಾಗೃತಿ ವಿದ್ಯಾರ್ಥಿಗಳಿಗೆ ಅವಶ್ಯ : ಡಿ.ಧ್ರುವಕುಮಾರ್ ಇಂಗಿತ

ಮೈಸೂರು.ಜೂ.7 : ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಹಾಗೂ ಶೇಷಾದ್ರಿಪುರಂ ಕಾಲೇಜು ಸಂಯುಕ್ತಾಶ್ರಯದಲ್ಲಿ ಈಚೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಹೂಡಾ ಅಧ್ಯಕ್ಷ ಡಿ.ಧ್ರುವಕುಮಾರ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಿಸಲು ವರ್ಷದಲ್ಲೊಂದು ದಿನ ಸಸಿಗಳನ್ನು ನೆಡುವಂತಾಗದೆ ವರ್ಷವಿಡೀ ಒಂದಿಲ್ಲೊಂದು ಕಡೆ ಸಸಿ ನೆಟ್ಟು ಪೋಷಿಸುವ ಸಂಸ್ಕೃತಿ ಬೆಳೆಸಕೊಳ್ಳಬೇಕೆಂದು ಆಶಿಸಿ. ವಿಶ್ವ ಪರಿಸರ ದಿನಾಚರಣೆಗೆ ಸೀಮಿತವಾಗದೇ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚಿಂತಕ ಗುಬ್ಬಿಗೂಡು ರಮೇಶ್, ಪಾಲಿಕೆ ಸದಸ್ಯ ಶಿವಣ್ಣ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ದುರ್ಗೇಶ್,  ಮ.ನ.ಲತಾ ಮೋಹನ್, ಮಹೇಶ್, ಪ್ರಾಂಶುಪಾಲರಾದ ಸೌಮ್ಯ ಈರಪ್ಪ, ಅರ್ಚನ ಸ್ವಾಮಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: