ಕರ್ನಾಟಕ

ಸ್ಕಾರ್ಫ್ ಧರಿಸಿ ಬಂದಿದ್ದ ಯುವತಿಗೆ ಸದನ ವೀಕ್ಷಣೆಗೆ ನಕಾರ

ರಾಜ್ಯ(ಬೆಂಗಳೂರು)ಜೂ.7:-  ಸದನ ವೀಕ್ಷಣೆಗೆ ಸ್ಕಾರ್ಫ್ ಧರಿಸಿ ಬಂದಿದ್ದ ಯುವತಿಯನ್ನು ಮಾರ್ಷಲ್‍ಗಳು ಕೆಲಕಾಲ ಒಳಗಡೆ ಪ್ರವೇಶಿಸದಂತೆ ತಡೆದ ಘಟನೆ ನಡೆದಿದೆ.

ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಸದನ ವೀಕ್ಷಣೆಗೆ ಎಂದು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಹಿಜಾಬ್ ಧರಿಸಿದ್ದ ಯುವತಿಗೆ ಅಧಿಕಾರಿಗಳು ಕಪ್ಪು ಸ್ಕಾರ್ಫ್ ತೆಗೆಯುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಯುವತಿ ತನ್ನ ತಲೆಯ ಮೇಲಿನ ಸ್ಕಾರ್ಫ್ ತೆಗೆಯಲು ನಿರಾಕರಿಸಿದ್ದಾಳೆ. ಈ ಕಾರಣಕ್ಕಾಗಿ ಸುಮಾರು 15 ನಿಮಿಷ ಯುವತಿಗೆ ಗ್ಯಾಲರಿಗೆ ಪ್ರವೇಶ ನೀಡಿರಲಿಲ್ಲ.  ಕೊನೆಗೆ ಪರೀಕ್ಷೆಗೆ ಒಳಪಡಿಸಿದ ನಂತರ ಯುವತಿಯನ್ನು ಸ್ಕಾರ್ಫ್ ಸಹಿತ ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶ ನೀಡಲಾಯಿತು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: