ಮೈಸೂರು

ಹೊಟೇಲ್‍ ಮಾಲೀಕರ ಸಂಘದಿಂದ ಅಂತಾರಾಷ್ಟ್ರೀಯ ಪ್ರವಾಸ

ಮೈಸೂರಿನ ಹೊಟೇಲ್ ಮಾಲೀಕರ ಸಂಘವು ಇಂಡೋನೇಷಿಯಾದ ಬಲಿಗೆ ಅಂತಾರಾಷ್ಟ್ರೀಯ ಪ್ರವಾಸ ಹಮ್ಮಿಕೊಂಡಿದೆ. ಸೆಪ್ಟೆಂಬರ್‍ 27ರ ವಿಶ್ವ ಪ್ರವಾಸಿ ದಿನದ ಅಂಗವಾಗಿ ಈ ಪ್ರವಾಸ ಆಯೋಜಿಸಲಾಗಿದೆ.

54 ಮಂದಿಯಿರುವ ಈ ತಂಡವು ಪ್ರವಾಸ ಹೊರಡಲಿದೆ. ಇಂಡೋನೇಷಿಯಾದ ಪ್ರವಾಸೋದ್ಯಮವು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಪ್ರವಾಸೋದ್ಯಮವನ್ನು ಉನ್ನತಿಯತ್ತ ಕೊಂಡೊಯ್ಯಲು ಅಲ್ಲಿನ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳನ್ನು ನಮ್ಮ ದೇಶದಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಹೊಟೇಲ್ ಮಾಲೀಕರ ಸಂಘವು ಪ್ರತಿ ವರ್ಷ ಅಂತಾರಾಷ್ಟ್ರೀಯ ಪ್ರವಾಸವನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: