ಮೈಸೂರು

ರವಿ.ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಜನಸಂಪರ್ಕ ಸಭೆ

ಮೈಸೂರು,ಜೂ.8:-  ನಗರ್ಲೆ ಗ್ರಾಮದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಆಧೀಕ್ಷಕ  ರವಿ.ಡಿ.ಚೆನ್ನಣ್ಣನವರ್ ಅವರು ಪಂಚಾಯತಿ ಮಟ್ಟದಲ್ಲಿ ಗ್ರಾಮದ ಜನ ಸಂಪರ್ಕ ಸಭೆ ಏರ್ಪಡಿಸಿದ್ದರು.

ಸಭೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿ ತಮ್ಮ ಅಹವಾಲನ್ನು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಲ್ಲಿಸಿದರು. ಜನ ಸಂಗ್ರಾಮ್ ಪರಿಷತ್ ಮೈಸೂರು ವಿಭಾಗೀಯ ಕಾರ್ಯದರ್ಶಿ ನಗರ್ಲೆ ಎಂ.ವಿಜಯ್ ಕುಮಾರ್ ಮಾತನಾಡಿ ನಮ್ಮ ಗ್ರಾಮಕ್ಕೆ ನಿಯೋಜನೆ ಗೊಂಡಿರುವ ಬಿಳಿಗೆರೆ ಹೆಡ್ ಕಾನ್ಸಟೇಬಲ್  ಚಂದ್ರಶೇಖರ್ ಅವರು ಅಕ್ರಮ ಚಟುವಟಿಕೆ ಮಾಡುವವರ ಜೊತೆ ಹೆಚ್ಚು ಸಂಪರ್ಕವಿದ್ದು ಇಲ್ಲಿನ ಸಮಸ್ಯೆಗಳು ಬಂದರೆ ಅವರೇ ಅವರ ಜೊತೆ ಶಾಮೀಲಾಗಿ ನೊಂದವರಿಗೆ ನ್ಯಾಯ ದೊರಕದಂತಾಗಿದೆ.  ಅವರನ್ನು ಬದಲಾಯಿಸಿ ಬೇರೆ ಕಾನ್ಸಟೇಬಲ್ ಅವರನ್ನು ನಿಯೋಜನೆ ಮಾಡಿಕೊಡಿ ಎಂದು ಮನವಿ ಮಾಡಿದರು. ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಡಿ ಎಂದರು.

ಶಿವಾರಂ ಎಂಬುವರು ಮಾತನಾಡಿ ನಮ್ಮ ಗ್ರಾಮದಲ್ಲಿ ಉಚಿತ ಕಾನೂನು ನೆರವು ಅಗತ್ಯವಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲವನ್ನೂ ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಸಭೆಯಲ್ಲಿ  ಸಹಾಯಕ ಪೋಲೀಸ್ ಅಧೀಕ್ಷಕ ಮಹಮ್ಮದ್ ಸುಜೀತ್, ಬಿಳಿಗೆರೆಯ ಆರಕ್ಷಕ ಉಪ ನಿರೀಕ್ಷಕ ಸತೀಶ್, ಎ.ಎಸ್.ಐ.ಗೋಪಾಲ್, ಗ್ರಾಮ ಪಂಚಾಯತಿ ಅಧ್ಯಕ್ಷ ಗೋನಹಳ್ಳಿ ಕುಮಾರ್, ವಾಲ್ಮೀಕಿ ನಿಗಮದ ನೂತನ ನಿರ್ದೇಶಕ ಕೃಷ್ಣ ನಾಯಕ,ಗ್ರಾಮದ ಗೌಡಿಕೆ ನಿಂಗಪ್ಪ, ಮುಖಂಡರು, ಸಾರ್ವಜನಿಕರು ನಗರ್ಲೆ ಗ್ರಾಮದ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಣಹಳ್ಳಿ ಕುಮಾರ್, ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮನು ಅಲ್ತಾಪ್ ಪಾಷ, ಹಾಲಿ ಗ್ರಾಮ ಪಂಚಾಯತಿ ಸದಸ್ಯ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು. (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: