ಮೈಸೂರು

ಡಿ.ಟಿ.ಎಸ್. ಫೌಂಡೇಷನ್ ವತಿಯಿಂದ ಹಾಡು ಹಳೆಯದಾದರೇನು ರಸಮಂಜರಿ ಕಾರ್ಯಕ್ರಮ

ಮೈಸೂರು. ಜೂ.8 : ಪ್ರವೀಣ್ ಡಿ.ಟಿ.ಎಸ್.ರಾವ್ ಸ್ಮರಣಾರ್ಥ ‘ಹಾಡು ಹಳೆಯದಾದರೇನು’ ಪುಟ್ಟಣ ಕಣಗಾಲ್ ಚಿತ್ರ ನಿರ್ದೇಶನದ ಜನಪ್ರಿಯ ಹಳೆ ಚಿತ್ರಗೀತೆಗಳ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿ.ಟಿ.ಎಸ್. ಫೌಂಡೇಶನ್ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ಜೂ.10ರ ಸಂಜೆ 5ಕ್ಕೆ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಧಾರ್ಮಿಕ ಮುಖಂಡ ಡಾ.ಭಾನುಪ್ರಕಾಶ್ ಶರ್ಮ ಚಾಲನೆ ನೀಡುವರು, ಡಿ.ಟಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮಗ ರಾಮು ಕಣಗಾಲ್ ಸಾಕ್ಷಿಯಾಗುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಕಮಿಷನರ್ ಡಾ.ಎ.ಸುಬ್ರಹ್ಮಣೇಶ್ವರ ರಾವ್, ಮಾಜಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಎಸ್.ಎ.ರಾಮದಾಸ್, ಮೇಯರ್ ಎಂ.ಜೆ.ರವಿಕುಮಾರ್, ಮೂಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಹಾಗೂ ಇತರರು ಪಾಲ್ಗೊಳ್ಳಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪ್ರಿಯ ಹಳೆಯ ಚಿತ್ರಗೀತೆಗಳನ್ನು ನಾಗಲಕ್ಷ್ಮೀ, ಶ್ರೇಯಾ ಕೆ.ಭಟ್, ರಶ್ಮಿ, ರುಚಿತಾ ರಾಜೇಶ್, ಡಾ.ಎ.ಡಿ.ಶ್ರಿನಿವಾಸ್, ತ್ಯಾಗರಾಜ್ ಚಂದ್ರು, ಗುರುಪ್ರಸಾದ್, ಮಂಜುನಾಥ್ ಇವರುಗಳ ಕಂಠಸಿರಿಯಲ್ಲಿ 1940-1990ರ ದಶಕದ ಚಲನಚಿತ್ರ ಗೀತೆಗಳು ಹೊರಹೊಮ್ಮಲಿವೆ, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಕ್ ಚಂದ್ರು, ಆಕಾಶವಾಣಿ-ದೂರದರ್ಶನ ಕಲಾವಿದ ಎ.ಎಸ್.ಪ್ರಸನ್ನಕುಮಾರ್, ರಾಘವೇಂದ್ರ ಪ್ರಸಾದ್, ಎಂ.ಡಿ.ಪಾರ್ಥಸಾರಥಿ ಭಾಗವಹಿಸಿದ್ದರು. (ಕೆ.ಎಂ.ಆರ್,ಎಸ್.ಎಚ್)

Leave a Reply

comments

Related Articles

error: