ಮೈಸೂರು

ಮೈಸೂರಿಗರ ಮನಸೂರೆ ಮಾಡಿದ ಶಾಲ್ಮಲಿ ಗಾಯನ

ಯುವ ದಸರಾದ ಮೂರನೇಯ ದಿನ ಗಾಯಕಿ ಶಾಲ್ಮಲಿ ಕೋಲ್‍ಗಡೆ ಹಾಡಿಗೆ ನೆರೆದಿದ್ದವರು ಕುಣಿದು ಕುಪ್ಪಳಿಸಿದರು.

ಮೊದಲ ಫಿಲ್ಮ್‍ಫೇರ್‍ ಪ್ರಶಸ್ತಿ ತಂದುಕೊಟ್ಟ ‘ಇಶ್ಕ್‍ಝಾದೆ’ ಚಿತ್ರದ ‘ಪರಿಶಾನ್… ಪರಿಶಾನ್..’ ಹಾಡಿನಿಂದ ಕಾರ್ಯಕ್ರಮ ಆರಂಭಿಸಿದ ಶಾಲ್ಮಲಿ ನೆರೆದಿದ್ದವರನ್ನು ಒಂದರೆಕ್ಷಣವೂ ಬೇಜಾರು ಮಾಡಿಸಿಲ್ಲ. ‘ಮೆ ತೆನು ಸಮಜಾವ’ ‘ ರಬ್ತಾ’, ‘ಅಲ್ವಿದಾ’ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

‘ಬ್ಯಾಂಗ್ ಬ್ಯಾಂಗ್’, ‘ಬತ್ತಮೀಜ್ ದಿಲ್’ ಚಿತ್ರದ ಹಾಡುಗಳನ್ನು ಹಾಡಿ ಬಳಿಕ ಹಳೆಯ ‘ಚುಮ್ಮಾ ಚುಮ್ಮಾ ದೇದೆ’, ‘ಪಾನ್‍ ಬನಾರಸ್‍ವಾಲ’, ‘ಯೇ ಮೇರಾ ದಿಲ್’, ‘ಬಚ್ನಾ ಏ ಹಸಿನೋ’ ಹಾಡುಗಳನ್ನು ಹಾಡಿದರು.

ಸುಮಾರು 90 ನಿಮಿಷಗಳ ಕಾಲ ನಡೆದ ಶಾಲ್ಮಲಿ ಗಾಯನವು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿತು. ನೆರೆದಿದ್ದವರು ವಯಸ್ಸಿನ ಮಿತಿ ಮರೆತು ಕುಣಿದು, ಚಪ್ಪಾಲೆ, ಶಿಳ್ಳೆ ಹೊಡೆದು ಸಂತಸಪಟ್ಟರು.

Leave a Reply

comments

Related Articles

error: