ಮೈಸೂರು

ಶ್ರೀಬಸವೇಶ್ವರ ಸೇವಾ ಸಮಿತಿ ನೂತನ ಘಟಕ ಉದ್ಘಾಟನೆ

ಮೈಸೂರು.ಜೂ.8 : ರಾಮಕೃಷ್ಣ ನಗರದಲ್ಲಿ ಶ್ರೀಬಸವೇಶ್ವರ ಸೇವಾ ಸಮಿತಿ ಉದ್ಘಾಟನಾ ಸಮಾರಂಭವನ್ನು ಜೂ.11ರಂದು ಬೆಳಿಗ್ಗೆ 10ಕ್ಕೆ ಶಾರದಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಲೋಕೇಶಪ್ಪ ಹೆಚ್.ಎನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಉದ್ಘಾಟಿಸುವರು, ಜೆ.ಎಸ್.ಎಸ್ ವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು, ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು, ಹೊಸಮಠದ ಚಿದಾನಂದ ಸ್ವಾಮಿ, ಕುದೇರುಮಠದ ಗುರುಶಾಂತಸ್ವಾಮಿ, ಜಪದಕಟ್ಟೆಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯಸ್ವಾಮಿ, ಕುಂದೂರು ಮಠದ ಶರತ್ ಚಂದ್ರಸ್ವಾಮಿ ಸಾನಿಧ್ಯ ವಹಿಸುವರು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಎಂ.ಚಂದ್ರಶೇಖರ್, ಅ.ಭಾ.ವೀ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ವಿ.ಬಸವರಾಜು, ನಗರಘಟಕದ ಅಧ್ಯಕ್ಷ ಜಿ.ಆರ್.ಪರಮೇಶ್ವರಪ್ಪ, ಸಿ.ಗುರುಸ್ವಾಮಿ ಹಾಗೂ ಇತರರು ಉಪಸ್ಥಿತರಿರುವರು.

ಹಿಮದೀಪ, ನಾಗೇಶ್, ಚೂಡಿಮಣಿ ಮತ್ತು ತಂಡಗಳಿಂದ  ವಚನಗಾಯನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪದಾಧಿಕಾರಿಗಳಾದ ಸುರೇಶ್ ಬಿ. ಗುರುಸ್ವಾಮಿ, ಸಿದ್ದೇಶ್ ಹೆಚ್.ಎಸ್. ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: