ಮೈಸೂರು

ಶಾಲೆಯ ಪಕ್ಕದಲ್ಲಿ ನಿಲ್ಲಿಸಿ ಕಿರಿಕಿರಿ ಉಂಟುಮಾಡುತ್ತಿದ್ದ ತಳ್ಳುವ ಗಾಡಿಗಳನ್ನು ವಶಪಡಿಸಿಕೊಳ್ಳಲು ಮುಂದಾದ ಪಾಲಿಕೆ

ಮೈಸೂರು,ಜೂ.8:- ನಿತ್ಯ ವ್ಯಾಪಾರ ಮಾಡಿ ಶಾಲೆಯ ಪಕ್ಕದಲ್ಲಿ ನಿಲ್ಲಿಸುತ್ತಿದ್ದ ತಳ್ಳುವ ಗಾಡಿಗಳನ್ನು ಮೈಸೂರು ಪಾಲಿಕೆ ವಶಪಡಿಸಿಕೊಳ್ಳಲು ಮುಂದಾದ ಘಟನೆ ನಡೆದಿದೆ.

ಮೈಸೂರಿನ ಚಾಮರಾಜ ಡಬಲ್ ರಸ್ತೆಯ ಉರ್ದು ಶಾಲೆಗೆ ಹೊಂದಿಕೊಂಡಂತೆ ಈ ಗಾಡಿಗಳನ್ನು ನಿಲ್ಲಿಸಲಾಗುತಿತ್ತು. ಕೆಲವರು ರಾತ್ರಿಯ ವೇಳೆ ಅದೇ ಗಾಡಿಯಲ್ಲಿ ಕುಡಿದು ಗಾಡಿಯೊಳಗೆ ಮಲಗುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಮೈಸೂರು ಪಾಲಿಕೆಗೆ ದೂರು ನೀಡಿದ್ದರು. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಅಧಿಕಾರಿ  ಪೂರ್ಣಿಮ ಮತ್ತವರ  ತಂಡ ಗಾಡಿಗಳನ್ನು ಪಾಲಿಕೆ ವಶಕ್ಕೆ ಪಡೆಯಲು ಸೂಚಸಿದರು. ಸ್ಥಳಕ್ಕಾಗಮಿಸಿದ ಗಾಡಿ ಮಾಲೀಕರು ಇದನ್ನು ನಾವೇ ಇಲ್ಲಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪಾಲಿಕೆ ಅಧಿಕಾರಿಗಳ ಬಳಿ ಮನವಿ ಮಾಡಿದರು. ಇಲ್ಲಿ ಗಾಡಿ ನಿಲ್ಲಿಸಿ ಕಲಿಯುವ ಮಕ್ಕಳಿಗೆ ತೊಂದರೆ ನೀಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು. ಮಾತ್ರವಲ್ಲ ಮಧ್ಯಾಹ್ನದೊಳಗಾಗಿ ಗಾಡಿ ತೆಗೆದುಕೊಂಡು ಹೋಗದಿದ್ದಲ್ಲಿ, ಗಾಡಿಯನ್ನು ಪಾಲಿಕೆಯ ವಶಕ್ಕೆ ಪಡೆಯಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಇದೇವೇಳೆ ಇಂಜಿನಿಯರ್ ರವಿಕುಮಾರ್ ಸೇರಿದಂತೆ ಅಭಯ ತಂಡದವರು  ಸ್ಥಳದಲ್ಲಿ ಉಪಸ್ಥಿತರಿದ್ದರು.  (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: