ಸುದ್ದಿ ಸಂಕ್ಷಿಪ್ತ

ಸಿ.ಎಫ಼್.ಟಿ.ಆರ್.ಐ ವಿರುದ್ಧ ಆರೋಪ ಆಧಾರ ರಹಿತ : ಸ್ಪಷ್ಟನೆ

ಮೈಸೂರು.ಜೂ.8 : ಸಂಸ್ಥೆಯ ಬಗ್ಗೆ ಮಾಡಿರುವ ಆರೋಪಗಳು ಆಧಾರ ರಹಿತವಾಗಿದ್ದು ನಿರ್ದೇಶಕರು ಯಾವ ರೀತಿಯ ಭಾಷೆ, ಧರ್ಮ,ಜಾತಿ ಮತ್ತು ವರ್ಣ ಭೇದವನ್ನು ಮಾಡಿಲ್ಲವೆಂದು ಸಿ.ಎಸ್.ಐ.ಆರ್.ಸಿ. ಎಫ಼್ ಟಿ ಆರ್ ಐ ಸಂಸ್ಥೆಯ ಮಾಹಿತಿ ಮತ್ತು ಪ್ರಚಾರ ವಿಭಾಗವೂ ಸ್ಪಷ್ಟನೆ ನೀಡಿದೆ.

ಕೆಲವು ವ್ಯಕ್ತಿಗಳೂ ಅನಪೇಕ್ಷಿತ ಕಾರ್ಯ ಸಾಧಿಸಲು ತಪ್ಪು ಮಾಹಿತಿ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿದ್ದಾರೆ. ಸಂಸ್ಥೆಯೂ ಆಹಾರ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವುದಲ್ಲದೇ ಸಿಬ್ಬಂದಿಗಳನ್ನು ನಿಯಮಗಳ ಅನುಸಾರವಾಗಿ ಸಮಾನತೆಯಿಂದ ಕಾಣುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: