ಮೈಸೂರು

ಮೂವೆಬಲ್ ಬ್ಯಾರಿಕೇಡ್ಸ್ ವಿತರಣೆ

ಮೈಸೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಮೈಸೂರು ನಗರ ಸಂಚಾರ ನಿರ್ವಹಣೆಗಾಗಿ ನಗರ ಘಟಕಕ್ಕೆ ವಿವಿಧ ಕಂಪನಿಗಳು ನೀಡಿದ  500 ಮೂವೆಬಲ್ ಬ್ಯಾರಿಕೇಡ್ಸಗಳನ್ನು ವಿತರಿಸಲಾಯಿತು.

ಲೂನಾರ್ಸ್ ಕಂಪನಿ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಗ್ರ್ಯಾಂಡ್ ಮರ್ಕ್ಯೂರೆ ಹೋಟೆಲ್, ಹೋಟೆಲ್ ಸುಹಾಸಿನಿ ಪ್ಯಾಲೇಸ್, ಮತ್ತು ಜೆ.ಎಸ್.ಎಸ್.ಮೆಡಿಕಲ್ ಯೂನಿವರ್ಸಿಟಿ ವತಿಯಿಂದ ಬ್ಯಾರಿಕೇಡ್ ಗಳನ್ನು ನೀಡಲಾಯಿತು.

ಬ್ಯಾರಿಕೇಡ್ ಗಳನ್ನು ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಹಸ್ತಾಂತರಿಸಲಾಯಿತು. ದಸರಾ ಸಂದರ್ಭದಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೂವೆಬಲ್ ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಲಾಗಿದೆ.

Leave a Reply

comments

Related Articles

error: