ಕರ್ನಾಟಕಮೈಸೂರು

ನಾಗಮಂಗಲದಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆ

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಜೂ.8 : ರಾಜ್ಯದ ವಿವಿಧೆಡೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಪತ್ತೆಯಾದ ನಂತರ ಇದೀಗ ಸಕ್ಕರೆ ನಾಡು ಮಂಡ್ಯದಲ್ಲೂ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿದೆ. ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಪ್ಲಾಸ್ಟಿಕ್ ಮೊಟ್ಟೆ ಮಾರಾಟವಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ನಾಗಮಂಗಲ ಪಟ್ಟಣದ ಮೋಹನ್ ಎಂಬುವರು ನಿನ್ನೆ ಅಂಗಡಿಯೊಂದ್ರಲ್ಲಿ ಐದು ಮೊಟ್ಟೆ ಖರೀದಿ ಮಾಡಿದ್ದಾರೆ. ಈ ಐದು ಮೊಟ್ಟೆಗಳನ್ನು ಬೇಯಿಸುವ ವೇಳೆ ಎರಡು ಮೊಟ್ಟೆ ಸರಿಯಾಗಿ ಬೇಯದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದ್ರಿಂದ ಆತಂಕಗೊಂಡ ಮೋಹನ್, ಬೆಳಗ್ಗೆ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಮತ್ತೆ ಮೂರು‌ ಮೊಟ್ಟೆ ತಂದು ಒಡೆದು ನೋಡಿದಾಗ ಮೊಟ್ಟೆಯೊಳಗಿನ ಬಂಡಾರ ಪ್ಲಾಸ್ಟಿಕ್ ನಂತೆ ಕಂಡು ಬಂದಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಮಾರಾಟವಾಗ್ತಿದೆ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೆಡೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮಾರಾಟವಾಗ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿರೋದ್ರಿಂದ ಸಾರ್ವಜನಿಕರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಸಕ್ಕರೆ ಮಾರಾಟ ಮಾಡುತ್ತಿರುವ ಪ್ರಕರಣಗಳು ರಾಜ್ಯದ ಹಲವು ಕಡೆ ಕಂಡುಬಂದಿದ್ದು, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

-ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: