
ಪ್ರಮುಖ ಸುದ್ದಿ
ಮ್ಯಾನ್ಹೋಲ್ ಕುರಿತು ಅರಿವು ಮೂಡಿಸಲು ಸಾಕ್ಷ್ಯಚಿತ್ರ: ಆಂಜನೇಯ
ಪ್ರಮುಖ ಸುದ್ದಿ, ಬೆಂಗಳೂರು, ಜೂ.8: ಮ್ಯಾನ್ಹೋಲ್ ಒಳಗೆ ಇಳಿದರೆ ಉಂಟಾಗುವ ಅಪಾಯ ಕುರಿತಂತೆ ಪೌರಕಾರ್ಮಿಕರಿಗೆ ಸಾಕ್ಷ್ಯ ಚಿತ್ರದ ಮೂಲಕ ಅರಿವು ಮೂಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆವತಿಯಿಂದ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿ ಮ್ಯಾನ್ಹೋಲ್ ಒಳಗೆ ಇಳಿಯುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿಸ್ತೃತವಾಗಿ ಚಿತ್ರಿಸಿ ಪೌರಕಾರ್ಮಿಕರಿಗೆ ಚಿತ್ರವನ್ನು ಪ್ರದರ್ಶಿಸಿ ಅರಿವು ಮೂಡಿಸಲಾಗುವುದು ಎಂದರು.
ಮ್ಯಾನ್ಹೋಲ್ ಒಳಗೆ ವಿಷ ಅನಿಲವಿದ್ದು ಇದರಿಂದ ಉಂಟಾಗಬಹುದಾದ ಪ್ರಾಣಾಪಾಯದ ಬಗ್ಗೆ ಸಾಕ್ಷ್ಯ ಚಿತ್ರದ ಮೂಲಕ ಜಾಗೃತಿ ಮೂಡಿಸಲಾಗುವುದು. ಮ್ಯಾನ್ಹೋಲ್ ಒಳಗೆ ಇಳಿಯುವವರು ಮತ್ತು ಇಳಿಸುವವರಿಗೂ ಇದರ ಅರಿವಿರಬೇಕು. ಮ್ಯಾನ್ಹೋಲ್ ಒಳಗೆ ಇಳಿಸಬಾರದೆಂಬ ಕಟ್ಟುನಿಟ್ಟಿನ ಕಾನೂನಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೈಸೂರು ಪ್ರಕರಣದ ಬಗ್ಗೆ ವರದಿ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. (ವರದಿ ಬಿ.ಎಂ)