ದೇಶಪ್ರಮುಖ ಸುದ್ದಿ

ಜಯಾಲಲಿತಾ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿದೆ ಅನುಮಾನ…

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಸುದ್ದಿಯು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದ ಪ್ರಮುಖ ಚರ್ಚಾ ವಿಷಯವಾಗಿದೆ. ಇದೀಗ ತೀವ್ರ ನಿಗಾ ಘಟಕದಲ್ಲಿರುವ ಜಯಲಲಿತಾರ ಫೋಟೊಗಳು ಶೇರ್‍ ಆಗುತ್ತಿದ್ದು, ಅವರು ಮೃತಪಟ್ಟಿದ್ದಾರೆ  ಎಂದ ಸುದ್ದಿಗಳು ಜಾಲತಾಣದಾದ್ಯಂತ ಹರಿದಾಡುತ್ತಿದೆ.

ಎಐಎಡಿಎಂಕೆ ಈ ಸುದ್ದಿಯನ್ನು ಸುಳ್ಳು ಎಂದು ಹೇಳಿದ್ದು, ಅಪೋಲೊ ಆಸ್ಪತ್ರೆ ಕೂಡ ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಸುದ್ದಿ ಪ್ರಕಟಣೆಯನ್ನು ನೀಡಲು ಆರಂಭಿಸಿದೆ. ಜ್ವರ ಮತ್ತು ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿದ್ದ ಜಯಾಲಲಿತಾ ಸೆ. 22ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಲ್ಲಿರುವ ಜಯಾಲಲಿತಾರನ್ನು ಭೇಟಿ ಮಾಡಲು ಯಾರಿಗೂ ಅವಕಾಶವಿಲ್ಲ ಎಂಬ ಸುದ್ದಿಯು ವಿವಾದಕ್ಕೆಇನ್ನಷ್ಟು ಪುಷ್ಠಿ ನೀಡಿದೆ. ಡಿಎಂಕೆ ಎಂ.ಕರುಣಾನಿಧಿ ಅವರು ಕೂಡ ಫೋಟೊ ಬಿಡುಗಡೆಗೊಳಿಸುವಂತೆ ತಿಳಿಸಿದ್ದರು.

ಟ್ವಿಟರ್‍ನಲ್ಲಿ ಹರಿದಾಡುತ್ತಿರುವ ಸುದ್ದಿ: ಜಯಾಲಲಿತಾ ಮೃತಪಟ್ಟಿದ್ದಾರೆ. ಈ ಬಗ್ಗೆ ತಮಿಳುನಾಡು ಸರಕಾರ ನಾಳೆ ಬೆಳಗ್ಗೆ ಅಧಿಕೃತವಾಗಿ ಸುದ್ದಿ ನೀಡಲಿದೆ. ಜಯಾಲಲಿತಾ ಕೃತಕ ಉಸಿರಾಟದ ಆಧಾರದಲ್ಲಿದ್ದಾರೆ ಎಂದು ಅಪೋಲೊ ಆಸ್ಪತ್ರೆಯಲ್ಲಿರುವ ಪರಿಚಿತರು ತಿಳಿಸಿದ್ದಾರೆ. ಜಯಾಲಲಿತಾ ಮೃತಪಟ್ಟಿದ್ದು ನಿಜವಾದರೂ ಪೊಲೀಸರು ಮಾತ್ರ ಇದು ಉತ್ಪ್ರೇಕ್ಷಿತ ಎಂದು ಹೇಳುವುದು ಆಶ್ಚರ್ಯಕರ ಸಂಗತಿ. ಈ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಉತ್ತರಾಧಿಕಾರಿ ಯಾರು?: ತಮಿಳುನಾಡು ಸಿಎಂ ಜಯಾಲಲಿತಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಎರಡು ವಾರ ಕಳೆದಿದ್ದು, ಸರಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸಲಾರಂಭಿಸಿದೆ. ಕೊನೆಗೂ ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ರಾಮಸ್ವಾಮಿ ಎಂಬವರು ಬುಧವಾರದಂದು ಮದ್ರಾಸ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಮದ್ರಾಸ್ ಹೈಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ. ಜಯಾಲಲಿತಾ ಅವರ ಆರೋಗ್ಯ ಸ್ಥಿತಿ ತಿಳಿಸಿ ಮತ್ತು ಫೋಟೊ ಬಿಡುಗಡೆಗೊಳಿಸಿ ಎಂದು ಕೋರಿರುವ ಅರ್ಜಿಯು ಕೇವಲ ಪಬ್ಲಿಸಿಟಿಗಾಗಿ ಸಲ್ಲಿಸಲಾಗಿದೆ. ಇದು ಸಾರ್ವಜನಿಕರ ಹಿತಾಸಕ್ತಿ ಅರ್ಜಿಯಲ್ಲ. ರಾಜಕೀಯ ಮತ್ತು ಪಬ್ಲಿಸಿಟಿ ಗಿಮಿಕ್‍ ಎಂದು ಹೈಕೋರ್ಟ್ ಹೇಳಿ ಅರ್ಜಿಯನ್ನು ವಜಾ ಮಾಡಿದೆ.

 

 

 

 

Leave a Reply

comments

Related Articles

error: