ಮೈಸೂರು

ಕೊಲೆ ಬೆದರಿಕೆ : ದೂರು

ಮೈಸೂರು,ಜೂ.9:- ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದಾರೆ.

ಶ್ರೀನಿವಾಸ್ ಎಂಬವರೇ ದೂರು ನೀಡಿದವರಾಗಿದ್ದಾರೆ.  ಗಣೇಶ್‌ಕುಮಾರ್ ಎಂಬವರು  1,80,000ರೂ. ಸಾಲ ಪಡೆದುಕೊಂಡಿದ್ದು ಹಣ ಕೊಟ್ಟಿಲ್ಲ. ಜೂ.5 ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾರಣ್ಯಪುರಂನಲ್ಲಿರುವ ಅವರ ಮನೆಯ ಬಳಿಗೆ ಬಂದಾಗ ಗಣೇಶ್‌ಕುಮಾರ್‌ ಮತ್ತು ಮಾದಪ್ಪ ಇಬ್ಬರೂ ಸೇರಿ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಚೆಕ್‌ನ್ನು ಕಿತ್ತುಕೊಳ್ಳಲು ಯತ್ನಿಸಿ, ಇಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: