ಸುದ್ದಿ ಸಂಕ್ಷಿಪ್ತ

ವಿಶ್ವಮಾನವ ದಸರಾ ಪ್ರದರ್ಶನ ಅ.8ರಿಂದ

ಅ.8ರಿಂದ 22ರವರೆಗೆ ಬಿಎಂ ಹ್ಯಾಬಿಟೇಟ್ ಮಾಲ್‌ನಲ್ಲಿ ಅನಿಕೇತನ ಸಂಸ್ಥೆ ವತಿಯಿಂದ ವಿಶ್ವಮಾನವ ದಸರಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಪೂರ್ಣಪ್ರಜ್ಞಾ ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಸಂಭ್ರಮಗಳಾದ ಕಲೆ, ವಿಜ್ಞಾನ, ಜ್ಞಾನ ವೈವಿಧ್ಯ, ವಿದ್ಯೆ, ಬಲ ಮತ್ತು ವಾಣಿಜ್ಯಗಳನ್ನು ಪ್ರದರ್ಶಿಸುವ ಉದ್ದೇಶದಿಂದ ವಿಶ್ವ ಮಾನವ ದಸರಾ ಆಯೋಜಿಸಲಾಗಿದೆ. ಮೈಸೂರಿನ ಆಟ, ಬೊಂಬೆ, ಹಳ್ಳಿಮನೆ, ದೀಪಾಲಂಕೃತ ಅರಮನೆ, ದಸರಾ ಜಾತ್ರೆ, ಒಡೆಯರ್ ವಿವಾಹ ಸಂಭ್ರಮ ಮೊದಲಾದವುಗಳ ಪರಿಚಯ ಇಲ್ಲಿದ್ದು, ಜೊತೆಗೆ ಕುಂದಣ ಕಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ನಗರದ ಮೋಹನ್ ಅವರ ಕುಂದಣ ಕಲೆ ಪ್ರದರ್ಶನವಿದೆ. ಜಯ ಎಂಬ ಬೋರ್ಡ್ ಗೇಂ ಸಹಾ ಪರಿಚಯಿಸಲಿದ್ದು, ಪ್ರವೇಶ ಶುಲ್ಕ 46 ರೂ. ನಿಗದಿಪಡಿಸಿ, ಸಂಗ್ರಹವಾದ ಹಣವನ್ನು ಕರಕುಶಲಗಾರರು ಹಾಗೂ ಕಲಾವಿದರಿಗೆ ನೀಡಲಾಗುವುದು ಎಂದರು.

ಇದರೊಂದಿಗೆ ಮೈಸೂರಿನಲ್ಲಿ ಒಂದು ಲಕ್ಷ ಸ್ವಚ್ಛತೆಗಾಗಿನ ಬ್ರಾಂಡ್ ಅಂಬಾಸಿಡರ್‌ಗಳ ಫೋಟೋ ತೆಗೆದು ಪ್ರಧಾನಿಗೆ ಕಳುಹಿಸಿ, ಫೇಸ್‌ಬುಕ್ ನೆರವಿನಿಂದ ಗಿನ್ನೆಸ್ ದಾಖಲೆಗೆ ಯತ್ನಿಸಲಾಗುವುದೆಂದರು.

ಅನಂತ್ ನಾಗರಾಜ್, ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: