ಸುದ್ದಿ ಸಂಕ್ಷಿಪ್ತ

ಸಿ.ಎಫ್.ಟಿ.ಆರ್.ಐ ಸಿಲುವೈ ನಾಥನ್ ವಿರುದ್ಧ ಹೋರಾಟದ ಎಚ್ಚರಿಕೆ

ಮೈಸೂರು.ಜೂ.9 : ಸಿ.ಎಫ್.ಟಿ.ಆರ್.ಐ ನಿರ್ದೇಶಕ ಪ್ರೊ.ರಾಮರಾಜಶೇಖರನ್ ಯಾವುದೇ ಜಾತಿ, ಧರ್ಮ, ವರ್ಣ ಬೇಧ ಮಾಡಿಲ್ಲವೆಂದು ಸಂಸ್ಥೆಯೂ ಮುಖ್ಯಸ್ಥರು ನೀಡಿರುವ ಹೇಳಿಕೆಯನ್ನು ಸಿ.ಎಫ್.ಟಿ.ಆರ್.ಐ ಉಳಿಸಿ ಹೋರಾಟ ವೇದಿಕೆ ಖಂಡಿಸಿದೆ. ಸ್ವತಃ ಸಿಲುವೈ ನಾಥನ್ ಮೂರು ವಿಭಾಗಗಳ ಮುಖ್ಯಸ್ಥರಾಗಿದ್ದು ನಿಮ್ಮಲ್ಲಿರುವ ಅಧಿಕಾರ ದಾಹ ತೋರುತ್ತಿದೆ ಎಂದು ದೂರಿದ್ದು, ಪ್ರೊ.ರಾಮರಾಜಶೇಖರನ್ ಅಧಿಕಾರ ವಹಿಸಿಕೊಂಡ ನಂತರ ಸಮಯಾನುಸಾರ ನೇಮಕಾತಿ ಮಾಡುತ್ತಿದ್ದು ನೌಕರರ ಕೊರತೆ ಇಲ್ಲ ಹೀಗಿರುವಾಗಲು ಯಾವ ನಿಯಮಾವಳಿ ಪ್ರಕಾರ ಮೂರು ವಿಭಾಗ ಮುಖ್ಯಸ್ಥರಾಗಲೂ ಅರ್ಹರೆಂದು ಪ್ರಶ್ನಿಸಿ ಕಾನೂನು ಬಾಹಿರವಾಗಿರವಾಗಿದ್ದು ಕೂಡಲೇ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಸ್ವಜನ ಪಕ್ಷಪಾತ ಮತ್ತು ಗೂಡಾಚಾರನಂತೆ ವರ್ತಿಸುತ್ತಿರು ಸಿಲುವೈನಾಥನ್ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: