ಸುದ್ದಿ ಸಂಕ್ಷಿಪ್ತ

ಉಚಿತ ಶೈಕ್ಷಣಿಕ ಕಾರ್ಯಾಗಾರ

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಲಗೋರಿ ಫೌಂಡೇಷನ್ ವತಿಯಿಂದ ಅ.8ರಿಂದ 17ರವರೆಗೆ ಉಚಿತ ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ರೂತ್ ಜಾಕ್ಲಿನ್ ತಿಳಿಸಿದರು.

ಬನ್ನೂರು ರಸ್ತೆಯ ಜೀನಿಯಸ್ ಕಾಲೇಜು ಆವರಣದಲ್ಲಿ ಶಿಬಿರ ನಡೆಯಲಿದ್ದು, ಸಾಮಾಜಿಕ ಚಟುವಟಿಕೆ ಅಂಗವಾಗಿ ಈ ಶಿಬಿರ ಆಯೋಜಿಸಲಾಗಿದೆ. ಶಿಬಿರ ಉಚಿತವಾಗಿದ್ದು, ಸಮೂಹ ಚಟುವಟಿಕೆ, ಅತಿಥಿಗಳಿಂದ ಕಿವಿಮಾತು, ಸಾಂಸ್ಕೃತಿಕ ಚಟುವಟಿಕೆ, ಏಕತಾ ಮನೋಭಾವ ರೂಢಿಸುವ ಚಟುವಟಿಕೆ, ಕೈಗಾರಿಕೆಗಳಿಗೆ ಭೇಟಿ, ಶಿಬಿರಾರ್ಥಿಗಳಿಂದ ಪ್ರದರ್ಶನ ಒಳಗೊಂಡಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ದೂ.81೦55 05264 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಜಯಪ್ರಕಾಶ್, ಆಯುಷ್ಮಾನ್, ಲೋಕೇಶ್, ಮಂಜುನಾಥ್ ಹಾಜರಿದ್ದರು.

Leave a Reply

comments

Related Articles

error: