ಸುದ್ದಿ ಸಂಕ್ಷಿಪ್ತ
ಜೂ.10ಕ್ಕೆ ದಿ.ಪಾರ್ವತಮ್ಮ ರಾಜಕುಮಾರ್ ಶ್ರದ್ದಾಂಜಲಿ ಸಭೆ
ಮೈಸೂರು.ಜೂ.9 : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ದಿ.ಪಾರ್ವತಮ್ಮ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜೂ.10ರ ಬೆಳಿಗ್ಗೆ 10.30ಕ್ಕೆ ಕೃಷ್ಣಮುರ್ತಿಪುರಂನಲ್ಲಿರುವ ಸಂಘದ ಆವರಣದಲ್ಲಿ ಆಯೋಜಿದೆ. ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಅಧ್ಯಕ್ಷತೆ ವಹಿಸುವರು, ಮಹಿಳಾ ಸಂಘದ ಸರೋಜಮ್ಮ ಪಾಪೇಗೌಡ ಹಾಗೂ ಎಸ್.ವಿ.ವೆಂಕಟೇಶಯ್ಯ, ರಂಗಕರ್ಮಿ ರಾಜಶೇಖರ್ ಕದಂಬ ಉಪಸ್ಥಿತರಿರುವರು. (ಕೆ.ಎಂ.ಆರ್)