ಕರ್ನಾಟಕಮೈಸೂರು

ವರುಣಾದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಪೇಗೌಡನ ಹುಂಡಿ ಐಟಿಐ ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಮೊದಲನೇ ಹಂತದಲ್ಲಿ 2.20ಕೋಟಿ ಹಾಗೂ ಎರಡನೇ ಹಂತದಲ್ಲಿ 2.85ಕೋಟಿ ಕಾಲೇಜು ನಿರ್ಮಾಣಕ್ಕೆ ಮಂಜೂರು ಮಾಡಲಾಗುವುದು. ವರಕೋಡು ಗ್ರಾಮವನ್ನು ಗ್ರಾಮಪಂಚಾಯತ್ ಕೇಂದ್ರ ಮಾಡಲಾಗಿದೆ ಎಂದರಲ್ಲದೇ ರಸ್ತೆ ಅಭಿವೃದ್ಧಿಗೆ 50ಲಕ್ಷ ಬಿಡುಗಡೆ ಮಾಡಲಾಗಿದ್ದು ಇತರೆ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದರು.

ತುಂಬಲ, ಯಡಕೋಳ, ಕುಪ್ಯೆ ಗ್ರಾಮಪಂಚಾಯತ್ ವ್ಯಾಪ್ತಿಯ 300 ಫಲಾನುಭವಿಗಳಿಗೆ ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ ಎಸ್.ಸಿ.ಪಿ.ಟಿ.ಎಸ್.ಪಿ ಅನುದಾನದಡಿ ಹಸು ವಿತರಣೆ ಕಾರ್ಯಕ್ರಮ ನಡೆಯಿತು. ಮೇಗಳಾಪುರದಲ್ಲಿ ಸಾಂಕೇತಿಕವಾಗಿ 60 ಹಸು ವಿತರಣೆ ಮಾಡಿದರು.

Leave a Reply

comments

Related Articles

error: