
ಕರ್ನಾಟಕಪ್ರಮುಖ ಸುದ್ದಿ
ಪ್ರಜ್ವಲ್ ರೇವಣ್ಣ ಕಾರು ಅಪಘಾತ : ಗಾಬರಿ ಬೇಡ ನಾನು ಸೇಫ್ ಸಂದೇಶ ರವಾನೆ
ರಾಜ್ಯ(ಶಿವಮೊಗ್ಗಾ)ಜೂ.9:- ಆಗುಂಬೆಯ ಹೊಸಗದ್ದೆ ಬಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗ, ಶಾಸಕ ಹೆಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ಕಾರು ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಪ್ರಜ್ವಲ್ ಸೇರಿದಂತೆ ಕಾರಿನಲ್ಲಿದ್ದವರೆಲ್ಲ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಪ್ರಜ್ವಲ್ ಅವರು ಸ್ನೇಹಿತರೊಂದಿಗೆ ಕಾರಿನಲ್ಲಿ ಶೃಂಗೇರಿ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಘಟನೆ ಸಂಭವಿಸಿದ್ದು, ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಗೊಂಡಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾರು ಭಯಪಡಬೇಡಿ,ಗಾಬರಿಯಾಗಬೇಡಿ ನಾನು ಸೇಫ್ ಆಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. (ಎಸ್.ಎನ್,ಎಸ್.ಎಚ್)