ಲೈಫ್ & ಸ್ಟೈಲ್

ದೇವಸ್ಥಾನಗಳ ಪ್ರಶಾಂತ ವಾತವರಣದಿಂದ ಮನಸಿಗೆ ನೆಮ್ಮದಿ

ದೇವಸ್ಥಾನಗಳೆಂದರೆ ಪವಿತ್ರ ಸ್ಥಳ, ನೆಮ್ಮದಿ ನೀಡುವ ಕೇಂದ್ರ. ಅಲೌಕಿಕ ಅನುಭೂತಿ ಮೂಡಿಸುವ, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದಂತಹ ತಾಣ. ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ವೃದ‍್ಧಿಸಿ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂಬುದು ಜನಜನಿತ.

ಹೌದು, ಇದು ಅತಿಶಯೋಕ್ತಿಯಲ್ಲ, ವೈಜ್ಞಾನಿಕ ಸಂಶೋಧನೆಯೂ ಇದನ್ನೇ ದೃಢಪಡಿಸಿದೆ. ನಮ್ಮ ಹಿರಿಯ ತಲೆಮಾರಿನವರು ದೇವಸ್ಥಾನಗಳಿಗೆ ತೆರಳುತ್ತಿದ್ದದ್ದು ಕೇವಲ ಭಕ್ತಿಯಿಂದಲ್ಲ – ಮಾನಸಿಕ ನೆಮ್ಮದಿ ಶಾಂತಿ ದೊರೆಯುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ನಿಮಗೆ ಅಚ್ಚರಿಯಾಗಬಹುದು, ಆದರೆ ಇದು ಆ ಸೂರ್ಯ-ಚಂದ್ರರಂತೆ ಸತ್ಯ. ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾನಸಿಕ ಮತ್ತು ದೈಹಿಕ  ಆರೋಗ್ಯ ವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ.

ವೈಜ್ಞಾನಿಕ ಕಾರಣಗಳು: ದೇವಸ್ಥಾನಗಳನ್ನು ನಿರ್ಮಿಸಿದ ಜಾಗದಲ್ಲಿ ಆಯಸ್ಕಾಂತೀಯ ತರಂಗಗಳು (magnetic waves) ಸದಾ ಪ್ರವಹಿಸುತ್ತಲೇ ಇರುತ್ತವೆ. ಆರೋಗ್ಯಕ್ಕೆ ಅತಿ ಅವಶ್ಯ ಧಾತುಗಳು ಸೂರ್ಯನ ಕಿರಣಗಳಲ್ಲಿ ಲಭಿಸುತ್ತವೆ. ದೇವರ ಮೂಲಸ್ಥಾನ ಗರ್ಭಗುಡಿಯ ಮೇಲೆ ಅಥವಾ ಮೇಲ್ಚಾವಣಿಗೆ ಅಳವಡಿಸುವ ಲೋಹದ ಹೊದಿಕೆಗಳು ತಾಂತ್ರಿಕವಾಗಿ ತನ್ನದೇ ಆಯಸ್ಕಾಂತೀಯ ಗುಣಗಳನ್ನು ಬಿಡುಗಡೆಗೊಳಿಸಿ ಸಕಾರಾತ್ಮಕ ಶಕ್ತಿ ಪ್ರವಹಿಸುವಂತೆ ಮಾಡುತ್ತದೆ. ದೇವಸ್ಥಾನ ಹಾಗೂ ಗರ್ಭಗುಡಿಯ ಪ್ರದಕ್ಷಿಣೆ ಹಾಕುವವರ ಮೇಲೆ ಇವು ದೇಹದೊಳಗೆ ಪ್ರವಹಿಸುತ್ತವೆ. ಆ ಪ್ರಶಾಂತ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಧ್ಯಾನಿಸುವುದರಿಂದ ದೇಹದ ಆಯಾಸ ನಿವಾರಣೆಯಾಗುವುದು. ನಿಶ್ಶಬ್ದ ವಾತಾವರಣದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು.

ಗರ್ಭಗುಡಿಯ ದೀಪಗಳು: ದೇವರ ಪ್ರತಿಮೆಯ ಮುಂದೆ ಸದಾ ಬೆಳಗುವ ತುಪ್ಪದ ದೀಪಗಳಿಂದ ಸೂಸುವ ಹೊಗೆಯನ್ನು ಉಸಿರಾಡುವುದರಿಂದ ದೇಹದಲ್ಲಿರುವ ವಿಷಾಕಾರಿ ವಸ್ತುಗಳು ಹೊರಹೋಗಿ ಶ್ವಾಸಕೋಶವು ಶುದ್ಧಗೊಳುವುದು. ಹಸುವಿನ ತುಪ್ಪವು ಆರ್ಯುವೇದದ ಆಗರವಾಗಿದೆ. ತುಪ್ಪದ ದೀಪಗಳಿಂದ ಹೊಮ್ಮುವ ಬೆಳಕಿಂದಲೂ ಸಕಾರಾತ್ಮಕ ಪರಿಣಾಮ ಉಂಟಾಗುವುದು. ಪೂಜೆ ವೇಳೆಯಲ್ಲಿ ಮೊಳಗಿಸುವ ಘಂಟಾನಾದ, ಮಂತ್ರ-ಘೋಷಗಳಿಂದ ಇತರ ಚಿಂತೆಗಳು ದೂರವಾಗಿ ಮನಸ್ಸು ಹಗುರವಾಗುವುದು.

ಗರ್ಭಗುಡಿಯಲ್ಲಿರುವ ದೇವರ ಪ್ರತಿಮೆ ಹಾಗೂ ಅಲ್ಲಿರುವ ತಾಮ್ರದ ಪೂಜಾ ಸಾಮಗ್ರಿಗಳಿಗೆ ಉತ್ತರ-ದಕ್ಷಿಣ ಧೃವಗಳಿಂದ (north-south pole) ಪ್ರವಹಿಸುವ ಶಕ್ತಿಯನ್ನು ಆಕರ್ಷಿಸುವ ಶಕ್ತಿಯಿದ್ದು ಇದರಿಂದ ಸಕಾರಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ. ಹೂಗಳ ಪರಿಮಳ, ಕರ್ಪೂರದ ಸುವಾಸನೆಯಿಂದ ಸುಮಧುರ ಭಾವ ನಮ್ಮನ್ನು ಪುಳಕಿತಗೊಳಿಸುತ್ತದೆ.

ತೀರ್ಥ: ಏಲಕ್ಕಿ, ಲವಂಗ, ತುಳಸಿ ಮತ್ತು ಪಚ್ಚಕರ್ಪೂರದಿಂದ ತಯಾರಿಸುವ ತೀರ್ಥವು ಔಷಧೀಯ ಶಕ್ತಿಯನ್ನು ಹೊಂದಿದೆ. ಇಂತಹ ತೀರ್ಥ ಸೇವನೆಯಿಂದ ದೇಹದಲ್ಲಿರುವ ಕಲ್ಮಶ ಕಡಿಮೆಯಾಗಿ, ನವಚೈತನ್ಯದ ಅನುಭೂತಿ ದೊರೆಯುತ್ತದೆ. ತೀರ್ಥಕ್ಕೆ ಬೆರೆಸುವ ಲವಂಗ ಹಲ್ಲುಗಳ ಆರೋಗ್ಯವನ್ನು ವೃದ್ಧಿಸುವುದು, ತುಳಸಿ- ನೆಗಡಿ ಕೆಮ್ಮು, ಕಫ ಸಂಬಂಧಿ ರೋಗಗಳನ್ನು ನಿವಾರಿಸುವುದು. ಏಲಕ್ಕಿ, ಪಚ್ಚಕರ್ಪೂರ – ಬಾಯಿಯಲ್ಲಿರುವ ಕೀಟಾಣುಗಳನ್ನು ನಾಶ ಮಾಡಿ ಸ್ವಚ್ಚಗೊಳಿಸುವುದು. ವಿಶೇಷ ದಿನಗಳಲ್ಲಿ ನಡೆಯುವ ದೀಪಾರಾಧನೆಯಿಂದ ಹೆಚ್ಚುಹೆಚ್ಚು ಸಕಾರಾತ್ಮಕ ಶಕ್ತಿ ಆವರಿಸುತ್ತದೆ.

ಒಡವೆ ಧಾರಣೆಯಿಂದ ಪ್ರಯೋಜನ: ದೇವಸ್ಥಾನದಲ್ಲಿ ಪ್ರವಹಿಸುವ ಸಕಾರಾತ್ಮಕ ಶಕ್ತಿಯು ಲೋಹದ ಆಭರಣಗಳೊಂದಿಗೆ ಆಕರ್ಷಣೆಗೊಳಪಡುವುದರಿಂದ, ಇದರ ಪರಿಣಾಮ ದೇಹದದಲ್ಲಿ ಸಕಾರಾತ್ಮಕ ಶಕ್ತಿ ವೃದ‍್ಧಿಸಿ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಾಣಸಿಗುತ್ತದೆ.

Leave a Reply

comments

Related Articles

error: