ಮೈಸೂರು

ಮೀಸಲಾತಿ ನೀಡುವಂತೆ ಆಗ್ರಹಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರತಿಭಟನೆ

ಪೊಲೀಸ್ ಇಲಾಖೆ  ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಸಂಪೂರ್ಣ ಮೀಸಲಾತಿ ನೀಡುವಂತೆ ಆಗ್ರಹಿಸಿ ಅಪರಾಧಶಾಸ್ತ್ರ ಹಾಗೂ ನ್ಯಾಯ ವಿಜ್ಞಾನ ಶಾಸ್ತ್ರ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಣ್ಣಿಗೆ ಕಪ್ಪು ಬಟ್ಟೆ ಧರಿಸಿ ಗುರುವಾರ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಮಹಾರಾಜ ಹಾಗೂ ಮಹಾಜನ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಪರಾಧ ಶಾಸ್ತ್ರವನ್ನು ಮೀಸಲಾತಿಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿದರಲ್ಲದೆ, ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳಲ್ಲೂ ಸಂಪೂರ್ಣ ಮೀಸಲಾತಿ ಕಲ್ಪಿಸಬೇಕು. ಎಂಬಿಬಿಸಿ, ಬಿಇ, ಬಿ.ಇಡಿ, ಬಿ.ಕಾಂ, ಬಿಬಿಎಂ ಹೀಗೆ ಒಂದೊಂದು ವಿಭಾಗದಲ್ಲಿ ಓದಿದವರಿಗೂ ಒಂದು ಕೆಲಸವನ್ನು ಮೀಸಲಿಡಲಾಗಿದ್ದರೂ ಸಹ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ ಅಪರಾಧಶಾಸ್ತ್ರ ಹಾಗೂ ನ್ಯಾಯ ವಿಜ್ಞಾನ ವಿಭಾಗದಲ್ಲಿ  ಸಂಪೂರ್ಣ ಮೀಸಲಾತಿ ನೀಡದೆ ವಿಭಾಗದ ವಿದ್ಯಾವಂತರ ಸ್ಥಿತಿ ಶೋಚನೀಯವಾಗಿದೆ ಎಂದು ಕಿಡಿಕಾರಿದರು.

ಈ ಹಿನ್ನಲೆಯಲ್ಲಿ ಉಳಿದ ಕೋರ್ಸ್‌ಗಳ ರೀತಿಯಲ್ಲೇ ನಮಗೂ ಉದ್ಯೋಗದಲ್ಲಿ ಶೇ.100ರಷ್ಟು ಮೀಸಲಾತಿ ಕಲ್ಪಿಸಬೇಕು. ಅಲ್ಲದೆ ನ್ಯಾಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಟ್ಟೆ ಕಟ್ಟಿ ಕತ್ತಲಲ್ಲಿ ಇರಿಸಲಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಶ್ರೀಕಾಂತ್, ಉತ್ಸವ್, ಕವನ, ಕೋಮಲ, ಹರ್ಷ, ಮಣಿಕಂಠ ಸೇರಿದಂತೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: