ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 8 : ಜಿಎಸ್ ಟಿ ಸಂವಾದ

ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆ.ಎಸ್.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಅರ್ಥಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗಗಳ ವತಿಯಿಂದ ಅಕ್ಟೋಬರ್ 8ರಂದು ಮಧ್ಯಾಹ್ನ 12ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾಲೇಜಿನ ಸುವರ್ಣಮಹೋತ್ಸವದ ಅಂಗವಾಗಿ ಕೆಂದ್ರ ಸರ್ಕಾರದ ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ ಸಂವಾದವನ್ನು ಆಯೋಜಿಸಲಾಗಿದೆ.

ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಂವಾದಕರಾಗಿ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ.ಬಿ.ಎಸ್.ಶ್ರೀಕಂಠಾರಾಧ್ಯ, ಅಂಕಣಕಾರ ಪ್ರೊ.ಆರ್. ಎಂ.ಚಿಂತಾಮಣಿ  ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: