ದೇಶಪ್ರಮುಖ ಸುದ್ದಿ

ಆಂಟಿಯನ್ನು ನೋಡಬೇಕೆಂದು 3 ದಿನಗಳಿಂದ ಕಾಯುತ್ತಿರುವ ಜಯಲಲಿತಾ ಸೋದರನ ಮಗಳು

ಚೆನ್ನೈ: ತಮಿಳುನಾಡು ಸಿಎಂ ಜಯಾಲಲಿತಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ 12 ದಿನ ಕಳೆದರೂ ಅವರ ಸಂಬಂಧಿಕರು ಯಾರೂ ಅವರನ್ನು ಭೇಟಿ ಮಾಡಿರುವ ಬಗ್ಗೆ ವರದಿಯಾಗಿಲ್ಲ. ಇದು ಹಲವು ಜಿಜ್ಞಾಸೆಗಳಿಗೆ ಎಡೆಮಾಡಿಕೊಟ್ಟಿದೆ. ಭೇಟಿಯಾಗಲು ಯತ್ನಿಸಿದ ಜಯಾಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್‍ ಅವರನ್ನು ಮೂರು ದಿನಗಳಿಂದ ಆಸ್ಪತ್ರೆಯ ಗೇಟಿನಲ್ಲೇ ತಡೆದು ನಿಲ್ಲಿಸಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.

“ಜಯಾಲಲಿತಾ ಆಂಟಿಯನ್ನು ಭೇಟಿ ಮಾಡಲು ಮೂರು ದಿನದಿಂದ ಯತ್ನಿಸುತ್ತಿದ್ದೇನೆ. ಆದರೆ, ಯಾರೂ ಒಳಗೆ ಬಿಡುತ್ತಿಲ್ಲ. ಆಂಟಿ ನನಗೆ ಬಹಳ ಆತ್ಮೀಯರಾಗಿದ್ದರು. ಈಗ ಅವರನ್ನು ನೋಡಬೇಕೆಂದರೆ ಯಾರೋ ಅಧಿಕಾರಿಗಳು ನನಗೆ ಫೋನ್‍ ಮಾಡುತ್ತಾರಂತೆ. ಇಲ್ಲಿಯವರೆಗೆ ನನಗೆ ಯಾವ ಕರೆಯೂ ಬಂದಿಲ್ಲ. ಆಂಟಿಯನ್ನು ನೋಡದೆ ನಾನು ವಾಪಸ್ ಹೋಗುವುದಿಲ್ಲ” ಎಂದು ದೀಪಾ ಜಯಕುಮಾರ್ ಪಟ್ಟು ಹಿಡಿದು ಆಸ್ಪತ್ರೆ ಆವರಣದಲ್ಲಿ ಜಯಾಲಲಿತಾ ಭೇಟಿಗಾಗಿ ಕಾಯುತ್ತಿದ್ದಾರೆ.

Leave a Reply

comments

Related Articles

error: