ಕರ್ನಾಟಕಪ್ರಮುಖ ಸುದ್ದಿ

ಆರ್ಮಿ, ನೇವಿ, ಏರ್’ಪೋರ್ಸ್‍ಗಳಲ್ಲಿ ಹುದ್ದೆಗಾಗಿ ಅರ್ಜಿ ಆಹ್ವಾನ

ಮೈಸೂರು, ಜೂ.10 : ಕೇಂದ್ರ ಲೋಕ ಸೇವಾ ಆಯೋಗ, ನವದೆಹಲಿ ಸಂಸ್ಥೆಯು ರಕ್ಷಣಾ ಪಡೆಗಳಾದ ಆರ್ಮಿ, ನೇವಿ & ಏರ್’ಫೋರ್ಸ್‍ಗಳಲ್ಲಿ ಒಟ್ಟು 390 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುತ್ತದೆ.

ಆರ್ಮಿ: ಪಿ.ಯು.ಸಿ.ಯಲ್ಲಿ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ತೇರ್ಗಡೆಯಾಗಿರಬೇಕು.

ನೇವಿ  ಮತ್ತು ಏರ್‍ಫೋರ್ಸ್: ಪಿ.ಯು.ಸಿ.ಯಲ್ಲಿ ವಿಜ್ಞಾನ (ಭೌತಶಾಸ್ತ್ರ & ಗಣಿತ) ವಿಷಯಗಳಲ್ಲಿ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ. ಅರ್ಜಿಯನ್ನು www.upsconline.nic.in ವೆಬ್ ಸೈಟ್ ನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ಕೇಂದ್ರ ಲೋಕಸೇವಾ ಆಯೋಗದ www.upsc.gov.in ಈ ವೆಬ್‍ಸೈಟ್‍ನಲ್ಲಿ ದೇಹದಾಢ್ರ್ಯತೆ, ಪರೀಕ್ಷಾ ವಿಧಾನ ಮತ್ತು ನೇಮಕಾತಿಯ ಪರಿಪೂರ್ಣ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡುವುದು ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಸಂಪರ್ಕಿಸಬಹುದು.

-ಎನ್.ಬಿ.ಎನ್.

Leave a Reply

comments

Related Articles

error: