ಕರ್ನಾಟಕಕ್ರೀಡೆ

ಏಕಲವ್ಯ ಪ್ರಶಸ್ತಿ ಪ್ರಕಟ : ಮೈಸೂರಿನ ಧೃತಿ ವೇಣುಗೋಪಾಲ್ ಗೆ ಏಕಲವ್ಯ ಪ್ರಶಸ್ತಿ

druti2015ನೇ ಸಾಲಿನ ಏಕಲವ್ಯ ಪ್ರಶಸ್ತಿ ಪಟ್ಟಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದು, 16 ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ, ಇಬ್ಬರಿಗೆ ಜೀವಮಾನದ ಸಾಧನೆ ಪ್ರಶಸ್ತಿ, 10ಕ್ರೀಡಾ ಪಟುಗಳಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರಿನ ಜೆ.ಕೆ.ಗ್ರೌಂಡ್ ಮೈದಾನದಲ್ಲಿ ಅಕ್ಟೋಬರ್ 7ರಂದು ನಡೆಯಲಿರುವ  ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದರು. ಏಕಲವ್ಯ ಪ್ರಶಸ್ತಿಗೆ ಭಾಜನರಾದವರು: ದಾಮಿನಿ ಕೆ.ಗೌಡ(ಈಜು)ಬೆಂಗಳೂರು, ವಿದ್ಯಾ ಪಿಳ್ಳೈ(ಬ್ರಿಲಿಯಡ್ಸ್)ಬೆಂಗಳೂರು, ಪವನ್ ಶೆಟ್ಟಿ(ದೇಹದಾರ್ಢ್ಯ)ಬೆಂಗಳೂರು, ನಿತಿನ್ ತಿಮ್ಮಯ್ಯ(ಹಾಕಿ)ಬೆಂಗಳೂರು, ರಾಜಗುರು ಎಸ್(ಕಬಡ್ಡಿ)ಬೆಂಗಳೂರು, ಕೃಷ್ಣ.ಎ.ನಾಯ್ಕೋಡಿ(ಸೈಕ್ಲಿಂಗ್)ಬಿಜಾಪುರ, ಅರವಿಂದ ಎ(ಬಾಸ್ಕೆಟ್ ಬಾಲ್)ಬೆಂಗಳೂರು, ಅರ್ಪಿತಾ ಎಂ(ಅಥ್ಲೆಟಿಕ್ಸ್)ಶಿವಮೊಗ್ಗಾ, ಮಹಮ್ಮದ್ ರಫೀಖ್ ಹೋಳಿ(ಕುಸ್ತಿ)ಧಾರವಾಡ, ಮೇಘನಾ ಎಂ.ಸಜ್ಜನರ್(ರೈಫಲ್)ಬೆಂಗಳೂರು, ಧೃತಿ ವೇಣುಗೋಪಾಲ್(ಟೆನ್ನಿಸ್)ಮೈಸೂರು, ಸನೂಪ್ ಡಿಕೋಸ್ತ್(ವಾಲಿಬಾಲ್)ಉಡುಪಿ, ನಿಶ್ಚಿತಾ ಜಿ.ಎಂ(ಶಟಲ್)ಬೆಂಗಳೂರು, ಶವಾದ್ ಜೆ.ಎಂ.ಪ್ಯಾರಾ(ಈಜು)ಬೆಂಗಳೂರು, ಕಾಂಚನ್ ಪಿ.ಮುಲ್ಕೋಕರ್(ಭಾರ ಎತ್ತುವುದು)ಬೆಳಗಾಂ ಆಯ್ಕೆಯಾಗಿದ್ದಾರೆ.

ಜೀವಮಾನದ ಸಾಧನೆಗಾಗಿ ತರಬೇತುದಾರರಾದ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್,(ಈಜು)ಬೆಂಗಳೂರು, ಶಿವಾನಂದ ಆರ್(ಕುಸ್ತಿ) ದಾವಣಗೆರೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಡಿ.ಎನ್.ರುದ್ರಸ್ವಾಮಿ(ಯೋಗ) ಬೆಂಗಳೂರು, ಪೂರ್ಣಿಮಾ(ಥ್ರೋಬಾಲ್)ದಕ್ಷಿಣ ಕನ್ನಡ, ಅಮೋಘ ಯು ಚಚಡಿ(ಆಟ್ಯಪಾಟ್ಯ)ಬೆಳಗಾಂ, ರಂಜಿತಾ.ಎಂ.ಪಿ(ಬಾಲ್ ಬ್ಯಾಡ್ಮಿಂಟನ್)ಹಾಸನ, ಪ್ರದೀಪ್ ಕೆ.ಸಿ.(ಖೋಖೋ)ಶಿವಮೊಗ್ಗಾ, ಸುಮಿತಾ ಯು.ಎಂ(ಕಬಡ್ಡಿ)ಕೊಡಗು, ಜೀವಂಧರ್ ಬಲ್ಲಾಳ್ ಕೆ.(ಕಂಬಳ) ಉಡುಪಿ, ಆನಂದ ಇರ್ವತ್ತೂರು(ಕಂಬಳ) ಉಡುಪಿ, ಆನಂದ.ಎಲ್, (ಕುಸ್ತಿ)ದಾವಣಗೆರೆ, ಮೋಶಪ್ಪ.ವಿ.ಗುಲವಾಳ(ಗುಂಡು ಎತ್ತುವುದು)ಬಾಗಲಕೋಟೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

Leave a Reply

comments

Related Articles

error: