ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ನಗರ ಪೊಲೀಸ್ ತುರ್ತು ಸಹಾಯವಾಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು, ಜೂ.10 : ಪೊಲೀಸರು ಸಾರ್ವಜನಿಕ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು, ಸಾರ್ವಜನಿಕರ ಜೊತೆ ಹೆಚ್ಚು ಸಂಪರ್ಕ ಹೊಂದಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ಕಮಾಂಡ್ ಸೆಂಟರ್ ಹಾಗೂ ಪರಿಷ್ಕೃತ, ವಿಸ್ತೃತ ಜಾಲದ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ನಾನಾ ಕಡೆಯ ಜನ ವಾಸ ಮಾಡುತ್ತಾರೆ. ಇವರ ಸುರಕ್ಷತೆ ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಈ ಕಾರಣಕ್ಕಾಗಿ ಇದೀಗ ದೂರವಾಣಿ ಸಂಖ್ಯೆ “100” ಜನರಿಗೆ ಹೆಚ್ಚು ಹತ್ತಿರಗೊಳಿಸಿದ್ದೇವೆ ಎಂದರು.

ತೊಂದರೆಯಲ್ಲಿರುವ ಜನರಿಗೆ ನ್ಯಾಯ ಒದಗಿಸಿಕೊಟ್ಟು ಅವರ ಸಮಸ್ಯೆ ಬಗೆಹರಿಸಬೇಕಾದದ್ದು ಪೊಲೀಸ್ ಇಲಾಖೆಯ ಕರ್ತವ್ಯ. ಸಮಾಜದಲ್ಲಿ ಶಾಂತಿ ಕಾಪಡಲು ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲೂ ಬದ್ಧವಿದೆ. ಸರಕಾರದಿಂದ ಎಲ್ಲ ಸೌಲಭ್ಯ, ಸಲಕರಣೆ ಕೋಡ್ತಿದ್ದಿವಿ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿರಬೇಕು ಎಂದರು.

ಸಹಾಯವಾಣಿ ಸಂಖ್ಯೆ 100 ಕ್ಕೆ ಕಲಾಸಿಪಾಳ್ಯದಿಂದ ಕರೆ ಮಾಡಿದ ಮಹಿಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಪಾಸ್‍ಪೋರ್ಟ್ ಕಳೆದು ಹೋಗಿದೆ ಎಂದು ದೂರು ನೀಡಿದರು.

ಇದೇ ವೇಳೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ಪೊಲೀಸ್ ಇಲಾಖೆ ಆಧುನಿಕ ಸೇವೆಗಳನ್ನು ಹೆಚ್ಚು ಉಪಯೋಗ ಮಾಡಿಕೊಂಡು ಒಳ್ಳೆಯ ಕೆಲಸವನ್ನ ಮಾಡುತ್ತಿದೆ ಎಂದರು. ಮುಖ್ಯಮಂತ್ರಿಯವರು ಒಂದು ತಂಡ ಮಾಡಿ ಇಂಗ್ಲೆಂಡ್‍ಗೆ ಕಳುಹಿಸಿಕೊಟ್ಟಿದ್ದರು. ನಾನು ಮತ್ತು ನಮ್ಮ ಪೊಲೀಸ್ ಕಮಿಷನರ್ ಅವರೂ ಕೂಡ ಈ ತಂಡದಲ್ಲಿದ್ದೆವು. ಅಲ್ಲಿ ಹೋಗಿ ನಾವು ಅಲ್ಲಿನ ಪೊಲೀಸರ ವಿಶೇಷತೆ ಮತ್ತು ಕಾರ್ಯಾಚರಣೆ ರೀತಿಯನ್ನು ನೋಡಿ ಬಂದಿದ್ದೇವೆ. ಅಲ್ಲಿನ ವ್ಯವಸ್ಥೆ ಬಹಳಷ್ಟು ಚೆನ್ನಾಗಿತ್ತು. 5 ಸೆಕೆಂಡ್‍ನಲ್ಲಿ ಕರೆಗೆ ಉತ್ತರಿಸುವ ವ್ಯವಸ್ಥೆ ಅಲ್ಲಿದೆ ಎಂದು ಹೇಳಿದರು.

ಅಲ್ಲಿನ ವಿಶೇಷತೆ ನೋಡಿ ನಾವು ಬೆಂಗಳೂರು ಪೊಲೀಸ್ ವ್ಯವಸ್ಥೆಯನ್ನು ಆಧುನಿಕರಣ ಮಾಡಲು ನಿರ್ಧಾರ ಮಾಡಿದೆವು. ದೇಶದಲ್ಲಿ ಪ್ರಥಮಮ ಬಾರಿಗೆ ನಮ್ಮ ಬೆಂಗಳೂರಿನ ಪೊಲೀಸ್ ವ್ಯವಸ್ಥೆ ಹಲವು ಸುಧಾರಣೆಗಳನ್ನು ಕಂಡಿದೆ. ಬೆಂಗಳೂರಿನ ಜನರಿಗೆ ತೊಂದರೆ ಆದ ತಕ್ಷಣ ಸಂಖ್ಯೆ 100ಕ್ಕೆ ಕರೆ ಮಾಡಬಹುದು. ನಗರ ಪೊಲೀಸರು ತಕ್ಷಣ ಸ್ಪಂದಿಸುತ್ತಾರೆ ಎಂದರು.

ಬೆಂಗಳೂರಿಗೆ ನಾನಾ ವಿಶೇಷತೆ ಇದ್ದು, ಅಂತರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ನಗರ. ಸರ್ಕಾರ ಉತ್ತಮ ಸೌಲಭ್ಯ ನೀಡಿಲಿದ್ದು, ಎಲ್ಲವೂ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ, ನಗರ ಪೋಲಿಸ್ ಆಯುಕ್ತ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

– ಎಸ್.ಎನ್/ಎನ್.ಬಿ.ಎನ್.

 

Leave a Reply

comments

Related Articles

error: