ಸುದ್ದಿ ಸಂಕ್ಷಿಪ್ತ

ಪಡಿತರ ಚೀಟಿದಾರರಿಗೆ ಆರೋಗ್ಯ ಸೇವೆಗಳಲ್ಲಿ ವ್ಯತ್ಯಯ : ಡಿಸಿ ಗೆ ಮನವಿ

ಮಡಿಕೇರಿ ಜೂ.10 :-ಜಿಲ್ಲೆಯಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ 3 ನೇ ಹಂತದ ಆಸ್ಪತ್ರೆಗಳಲ್ಲಿ(ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು) ವಿವಿಧ ಆರೋಗ್ಯ ಸೇವೆಗಳನ್ನು ರಿಯಾಯಿತಿ ಮತ್ತು ಉಚಿತವಾಗಿ ಪಡೆಯುವ ಸಂದರ್ಭಗಳಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಂದರೆಗಳ ಹಿನ್ನಲೆಯಲ್ಲಿ ಆರೋಗ್ಯ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ವೈದ್ಯಕೀಯ ಪ್ರಕೋಷ್ಠ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿಯ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಮನುಮುತ್ತಪ್ಪ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ|ಬಿ.ಸಿ.ನವೀನ್ ಕುಮಾರ್ ಮತ್ತು ತಂಡದವರಿಗೆ ಜಿಲ್ಲಾಧಿಕಾರಿಗಳು ಅತ್ಯುತ್ತಮ ಸ್ಪಂದನೆ ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪಡಿತರ ಚೀಟಿಯ ಕುಂದುಕೊರತೆ ಹಾಗೂ ನೈಜ ಫಲಾನುಭವಿಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಶೀಘ್ರ ಗಮನ ಹರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

 

ಬಿಜೆಪಿ ಮುಖಂಡ ಕನ್ನಂಡ ಸಂಪತ್, ಪ್ರಕೋಷ್ಠದ ಸದಸ್ಯರಾದ ಡಾ. ಧ್ಯಾನ್ ಪೂಣಚ್ಚ,  ಡಾ.ಉದಯ ಕುಮಾರ್ ಮನವಿ ಸಲ್ಲಿಕೆ ಸಂದರ್ಭ ಹಾಜರಿದ್ದರು. (ವರದಿ:ಕೆಸಿಐ,ಎಸ್.ಎಚ್)

Leave a Reply

comments

Related Articles

error: