ಕ್ರೀಡೆಪ್ರಮುಖ ಸುದ್ದಿ

ಕ್ರಿಶ್ಚಿಯಾನೋ ರೊನಾಲ್ಡೊಗೆ ಅವಳಿ ಮಕ್ಕಳ ಜನನ

ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಟ್ ತಂಡದ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ರೊನಾಲ್ಡೋ ಅವರು ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆದಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೋಗೆ ಇದಕ್ಕೂ ಮುನ್ನವೇ ಒಬ್ಬ ಮಗನಿದ್ದಾನೆ. 2010ರಲ್ಲಿ ಕ್ರಿಸ್ಟಿಯಾನೋ ಜೂನಿಯರ್ ಗೆ ರೊನಾಲ್ಡೋ ತಂದೆಯಾಗಿದ್ದರು. ಈಗ ಒಂದು ಗಂಡು ಮತ್ತೊಂದು ಹೆಣ್ಣು ಮಗು ಜನಿಸಿದ್ದು, ಈವಾ ಹಾಗೂ ಮಟೆಯೋ ಎಂದು ಹೆಸರಿಡಲಾಗಿದೆ.

ಕೆಲದಿನಗಳ ಹಿಂದೆಯೇ ರೊನಾಲ್ಡೋ ಅವಳಿ ಮಕ್ಕಳಿಗೆ ತಂದೆಯಾಗ್ತಿದ್ದಾರೆ ಅಂತಾ ವರದಿಯಾಗಿತ್ತು. 32 ವರ್ಷದ ರೊನಾಲ್ಡೋ ಸದ್ಯ ಸ್ಪೇನ್ ಮಾಡೆಲ್ ಜಾರ್ಜಿನಾ ರೋಡ್ರಿಗ್ಸ್ ಜೊತೆಗೆ ಡೇಟಿಂಗ್ ನಡೆಸುವುದು ಆಗಾಗ ವರದಿಯಾಗುತ್ತೆ.

ಈ ಮೊದಲು ರೊನಾಲ್ಡೋ ಬಾಡಿಗೆ ತಾಯಿ ಮೂಲಕವೇ ಮಗುವನ್ನು ಪಡೆದಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ ರೊನಾಲ್ಡೋ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.

(ಎನ್.ಬಿ.ಎನ್)

Leave a Reply

comments

Related Articles

error: