ಕ್ರೀಡೆಮೈಸೂರು

ಮೈಸೂರಿನಲ್ಲಿ ಪ್ರಥಮ ಬಾರಿಗೆ ವುಮೆನ್ಸ್ ಪ್ರೊ ಕ್ರಿಕೆಟ್ ಲೀಗ್ ಟಿ-20

ಮೈಸೂರು, ಜೂ.12:- ಮಹಿಳೆಯರಲ್ಲಿ ಕ್ರೀಡೆಯಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ಉದ್ದೇಶದಿಂದ ಮಹಿಳಾ ಕ್ರಿಕೆಟ್ ವುಮೆನ್ಸ್ ಪ್ರೊ ಕ್ರಿಕೆಟ್ ಲೀಗ್ ಟಿ-20 ಯನ್ನು ಮೈಸೂರು ವಿಶ್ವವಿದ್ಯಾನಿಲಯದ ಜಯಚಾಮರಾಜೇಂದ್ರ ಮೈದಾನದಲ್ಲಿ ಜೂ.12ರಿಂದ 16ರವರೆಗೆ  ಆಯೋಜಿಸಲಾಗಿದ್ದು, ಚಾಲನೆ ನೀಡಲಾಯಿತು.

ಭಾರತದಲ್ಲಿ ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೂರ್ನ್ ಮೆಂಟ್ ಆಯೋಜಿಸಲಾಗಿದ್ದು, 8ತಂಡಗಳು ಜೂ.16ರಂದು ಚಾಂಪಿಯನ್ ಶಿಪ್ ಗಾಗಿ ಸೆಣಸಲಿವೆ.ದಿನಕ್ಕೆ ನಾಲ್ಕು ಪಂದ್ಯಗಳು ನಡೆಯಲಿದ್ದು, ನಾಲ್ಕು ತಂಡಗಳು 3 ಲೀಗ್ ಪಂದ್ಯಗಳನ್ನು ಆಡಲಿವೆ. ಅತ್ಯುತ್ತಮವಾಗಿ ಆಡಿದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು ಸೆಮಿಫೈನಲ್ ಜೂ.15ರಂದು ನಡೆಯಲಿದೆ.

ಕರ್ನಾಟಕ ಆಟಗಾರರಾದ ರಕ್ಷಿತಾ ಕೃಷ್ಣಪ್ಪ, ಸಂಜನಾ ಬಟ್ನಿ, ಪ್ರತ್ಯೂಷಾ ಚೆಲ್ಲೂರ್, ಸಹನಾ ಪವಾರ್, ವನಿತಾ ವಿಆರ್, ಆಕಾಂಕ್ಷಾ ಕೊಯ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಟೂರ್ನ್ ಮೆಂಟ್ ಆಯೋಜಿಸಿದ್ದಾರೆ. ಯುವಜನತೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವುದರೊಂದಿಗೆ ಹೆಚ್ಚಿನ ಯುವತಿಯರು ಕ್ರಿಕೆಟ್  ನ್ನು ಪ್ರೊಪೆಶನ್  ಆಗಿಸಿಕೊಳ್ಳಲಿ ಎಂಬ ಸದುದ್ದೇಶದೊಂದಿಗೆ ಮೊದಲ ಮಹಿಳಾ ಪ್ರೊ.ಕ್ರಿಕೆಟ್  ಲೀಗ್ ನ್ನು ಆಯೋಜಿಸಲಾಗಿದೆ. (ಹೆಚ್.ಎನ್,ಎಸ್.ಎಚ್)

Leave a Reply

comments

Related Articles

error: