ಕರ್ನಾಟಕಪ್ರಮುಖ ಸುದ್ದಿ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟವರ ಬಂಧನ

ಬೆಂಗಳೂರು, ಜೂ.12 : ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳಿತ್ತಿದ್ದವರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ.

ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಪ್ರವೀಣ್ ಶೆಟ್ಟಿ ಬಣದ ಕರವೆ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ನೂರಾರು ಕಾರ್ಯಕರ್ತರು ಮತ್ತು ಬಂದ್ ಬೆಂಬಲಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟವರನ್ನು ಬಂಧಿಸಿ ಬಿ.ಎಂ.ಟಿ.ಸಿ ಬಸ್‍ನಲ್ಲಿ ಬೇರೆಡೆ ಕರೆದೊಯ್ಯಲಾಯಿತು.

ಮಹದಾಯಿ, ಮೇಕೆದಾಟು, ಬಯಲು ಸೀಮೆಗೆ ಶಾಶ್ವರ ನೀರು ಒದಗಿಸುವ ಬೇಡಿಕೆಗಳು ಹಾಗೂ ರೈತರ ಸಾಲಮನ್ನಾಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಯಿಂದ ಇಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ.

-ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: