ಮೈಸೂರು

ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಮದ್ಯದಂಗಡಿಗಳಿಗೆ ನೋಟೀಸ್ ಜಾರಿ

ಮೈಸೂರು,ಜೂ.12:- ರಾಷ್ಟ್ರೀಯ ಹೆದ್ದಾರಿಯ 220&500 ಮೀಟರ್ ರಸ್ತೆ ಬಳಿ ಇರುವ  ಮದ್ಯದಂಗಡಿಗಳಿಗೆ ಹೆಚ್ ಡಿ ಕೋಟೆ ಅಬಕಾರಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದನ್ವಯ ಮದ್ಯದಂಗಡಿ ಮಾಲೀಕರಿಗೆ  ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಇದೇ ತಿಂಗಳು 30ರೊಳಗೆ ಮದ್ಯದಂಗಡಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಹೆಚ್ ಡಿ ಕೋಟೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಬರುವ 21ಮದ್ಯದಂಗಡಿಗಳಿಗೆ ನೋಟೀಸ್ ನೀಡಲಾಗಿದೆ. ಇದೀಗ ರಾಜ್ಯ ಸರ್ಕಾರ ರಾಷ್ಡ್ರೀಯ ಹೆದ್ದಾರಿಗಳಿಗೆ ಬರುವ ರಸ್ತೆಗಳನ್ನು  ರಾಜ್ಯ ಸರ್ಕಾರಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಡಿನೋಟಿಫಿಕೇಷನ್ ಸಲ್ಲಿಸಿದೆ. ಇದೀಗ ಇಂತಹ ಮಧ್ಯದಂಗಡಿಗಳ ವಿಷಯ ಸುಪ್ರೀಂ ಅಂಗಳದಲ್ಲಿ ಚರ್ಚೆಯಾಗಲಿದೆ. ಸರ್ಕಾರದ ಖಜಾನೆ ತುಂಬಲು ಮದ್ಯದಂಗಡಿಗಳು ಅನಿವಾರ್ಯವಾಗಿದ್ದು, ಇವುಗಳನ್ನ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಕೊನೆಯ ಪ್ರಯತ್ನ ಸಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: