ಮೈಸೂರು

ಸುತ್ತೂರು ಶ್ರೀಗಳ ಜೊತೆ ಹೆಚ್. ವಿಶ್ವನಾಥ್ ರಹಸ್ಯ ಮಾತುಕತೆ

ಮೈಸೂರು,ಜೂ.12:- ಮೈಸೂರಿನ ಸುತ್ತೂರು ಮಠದ ಶಿವರಾತ್ರೀ ದೇಶಿಕೇಂದ್ರ ಶ್ರೀಗಳ ಜತೆ  ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಸಿದ್ದವಾಗಿರುವ ವಿಶ್ವನಾಥ್ ಜತೆ ಸುತ್ತೂರು ಶ್ರೀಗಳು ಸಮಾಲೋಚನೆ ನಡೆಸಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ಸಮೀಪವಿರುವ ಸುತ್ತೂರು ಮಠದಲ್ಲಿ ಶ್ರೀಗಳನ್ನು ವಿಶ್ವನಾಥ್ ಭೇಟಿಯಾಗಿದ್ದಾರೆ. ಸದ್ಯದಲ್ಲೇ ವಿಶ್ವನಾಥ್,  ಜೆಡಿಎಸ್ ಅಥವಾ ಬಿಜೆಪಿ ಸೇರ್ಪಡೆಗೊಳ್ಳಲಿದ್ದು,  ಅಂತಿಮ ನಿಲುವು ತಾಳುವ ಮುನ್ನ ವಿಶ್ವನಾಥ್ ಅವರನ್ನು ಕರೆದಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: