ಮೈಸೂರು

32ನೇ ವಾರ್ಡ್ ಗೆ ಜು.2 ರಂದು ಉಪಚುನಾವಣೆ

ಮೈಸೂರು,ಜೂ.13:- ರಾಜ್ಯ ಚುನಾವಣಾ ಆಯೋಗ ಮೈಸೂರು ಮಹಾನಗರಪಾಲಿಕೆಗೆ ಸೇರಿದ 32ನೇ ವಾರ್ಡ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಿಸಿದ್ದು, ಜುಲೈ 2ರಂದು ಉಪಚುನಾವಣೆ ನಡೆಯಲಿದೆ.

32ನೇ ವಾರ್ಡ್ ಸದಸ್ಯರಾಗಿದ್ದ ಮಹದೇಶ್ ಹುಣಸೂರು ಜೋಡಿಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಅದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದ್ದು, ಜೂ.14ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದೆ. ಅಂದಿನಿಂದಲೇ ಚುನಾವಣೆ ನಡೆಯುವ ವಾರ್ಡ್ ನಲ್ಲಿ ನೀತಿ ಸಂಹಿತೆ ಜಾರಿಗೊಳ್ಳಲಿದೆ. ಜು.2ರಂದು ನಡಟೆಯುವ ಚುನಾವಣೆಗೆ ಜೂ.21 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮತ ಎಣಿಕೆ ಜು.5ರಂದು ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: