ಸುದ್ದಿ ಸಂಕ್ಷಿಪ್ತ

ಜೂ.18: 28ನೇ ಸಂವಾದ

ಮೈಸೂರು,ಜೂ.13:- ಮೈಸೂರು ಸೈನ್ಸ್ ಫೌಂಡೇಶನ್ ಮತ್ತು ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದ 28ನೇ ಸಂವಾದವನ್ನು ಜೂ.18ರಂದು ಬೆಳಿಗ್ಗೆ 10ಗಂಟೆಗೆ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಸಿದ್ದಾರ್ಥನಗರದಲ್ಲಿ ಏರ್ಪಡಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಯಾಗಿ  ಬೆಂಗಳೂರಿನ  ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನ ನಿರ್ದೇಶಕ  ಡಾ.ಜಿ.ವೆಂಕಟೇಶ್, ಪಾಲ್ಗೊಳ್ಳುತ್ತಿದ್ದು, ಭಾರತದಲ್ಲಿ ವಿಜ್ಞಾನದ ಬೆಳವಣಿಗೆಗೆ ಹೋಮಿ ಜಹಾಂಗೀರ್ ಬಾಬಾ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿ.ಬಿ.ಸಂತೋಷ್ ಕುಮಾರ್ ಮೊ.ಸಂ.8105503863ನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: