ಕರ್ನಾಟಕಪ್ರಮುಖ ಸುದ್ದಿಮೈಸೂರು

ಸೆಪ್ಟಂಬರ್ 3ರಿಂದ ಅಲ್ಜೈಮರ್ ಮಾಸಾಚರಣೆ

ಅಲ್ಜೈಮರ್ ಕಾಯಿಲೆಯ ಲಕ್ಷಣಗಳು ಮತ್ತು ಅಲ್ಜೈಮರ್ ಪೀಡಿತ ವ್ಯಕ್ತಿಗಳ ಬಗ್ಗೆ ವಹಿಸಬೇಕಾದ ಕಾಳಜಿ ಕುರಿತು ಅವಶ್ಯ ಮಾಹಿತಿ ಒದಗಿಸುವ ಸಲುವಾಗಿ ಆಯೋಜಿಸಿರುವ ವಿಶ್ವ ಅಲ್ಜೈಮರ್ ಮಾಸಾಚರಣೆಯ ಉದ್ಘಾಟನಾ ಸಮಾರಂಭವು ಸೆಪ್ಟಂಬರ್ 3ರಂದು ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಜೆ.ಎಲ್.ಬಿ. ರಸ್ತೆಯ ಫಾರುಕ್ ಇರಾನಿ ಹಾಲ್, ರೋಟರಿ ಕ್ಲಬ್‌ನಲ್ಲಿ ಕಾರ್ಯಕ್ರಮವನ್ನು ಶ್ರೀರಾಮಕೃಷ್ಣ ವಿದ್ಯಾಲಯದ ಸಂಪರ್ಕಾಧಿಕಾರಿ ಸ್ವಾಮಿ ಯುಕ್ತೇಶಾನಂದ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಳ್ಳುವರು. ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಕಾರ್ಯದರ್ಶಿ ಹೆಚ್.ಕೆ. ಶ್ರೀನಾಥ್ ಗೌರವ ಅತಿಥಿಗಳು. ಜೆ.ಎಸ್.ಎಸ್. ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹನುಮಂತಾಚಾರ್ ಅಧ್ಯಕ್ಷತೆ ವಹಿಸುವರು. ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಅಲ್ಜೈಮರ್ ಅಂಡ್ ರಿಲೆಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾದ ಮೈಸೂರು ವಿಭಾಗದ ಸದಸ್ಯರು ಉಪಸ್ಥಿತರಿರುವರು.
ಅಲ್ಜೈಮರ್ ರೋಗವು ಮೆದುಳು ಸಂಬಂಧಿ ರೋಗವಾಗಿದ್ದು ಶೇ 50ರಿಂದ  60ರಷ್ಟು ಜನರಲ್ಲಿ ಕಂಡು ಬರುತ್ತದೆ. ರೋಗದಿಂದ ನಿಧಾನವಾಗಿ ನೆನಪಿನ ಶಕ್ತಿ ಮತ್ತು ಆಲೋಚನಾ ಕೌಶಲ್ಯ ನಾಶವಾಗುವುದು. ಮೆದುಳಿನ ಅಂಗಾಂಶದ ಅತಿರೇಕದಿಂದ ಈ ರೋಗ ಹರಡುತ್ತದೆ. ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ಶೇ. 60ರಷ್ಟು ಜನರಲ್ಲಿ ಈಗ ತಲೆದೋರುತ್ತಿದ್ದು, 2040ರ ವೇಳೆಗೆ ಶೇ.71ರಷ್ಟು ಏರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ನೆನಪಿನ ಶಕ್ತಿ ವರ್ಧಿಸಲು ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಕ್ಷೇಮಪಾಲಕರು ಮತ್ತು ವೈದ್ಯರು ವಹಿಸಬೇಕಾದ ಎಚ್ಚರಿಕೆಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು. ಶಿಬಿರವು ಅಲ್ಜೈಮರ್ ಸಮಸ್ಯೆಯಿಂದಾಗಿ ಮಾನಸಿಕ ಹಾಗೂ ಆರ್ಥಿಕವಾಗಿ ಬಳಲುತ್ತಿರುವವರನ್ನು ಸಾಂತ್ವಕ ಕೊಡುವ ನಿಟ್ಟಿನಲ್ಲಿ ನೆರವಾಗಲಿದೆ.

Leave a Reply

comments

Related Articles

error: