ಮೈಸೂರು

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ: ಬೆಂಗಳೂರಿನ ಲಕ್ಷ್ಮಣ್ ಪ್ರಥಮ

ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ 36.50 ಕೆಜಿ ಹಾಲು ಕರೆಯುವ ಮೂಲಕ ಬೆಂಗಳೂರಿನ ಲಕ್ಷ್ಮಣ್ ಹೊಗೆಬಂಡಿ ಮೂರನೇ ಬಾರಿಗೆ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಪಶುಸಂಗೋಪನಾ ಇಲಾಖೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೋಪಾಲಕರ ಸಂಘದ ವತಿಯಿಂದ ಗುರುವಾರ ಜೆ.ಕೆ.ಗ್ರೌಂಡ್ಸ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ನಟ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ ಅವರ ಸ್ಮರಣಾರ್ಥ ಹಾಲು ಕರೆಯುವ ಸ್ಪರ್ಧೆಯನ್ನು ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಹಾಸನದ 16 ಮಂದಿ ಸ್ಪರ್ಧಿಗಳು ತಮ್ಮ ಹಸುಗಳೊಂದಿಗೆ ಬಂದಿದ್ದರು.

ಬನ್ನೂರಿನ ಆನಂದ್ 34.200 ಕೆಜಿ ಹಾಲು ಕರೆಯುವ ಮೂಲಕ ದ್ವಿತೀಯ ಮತ್ತು ಬೆಂಗಳೂರು ದೊಡ್ಡ ನಾಗಮಂಗಲದ ಸುಂಚಿತ್ 31.950 ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಥಮ ಸ್ಥಾನ ಪಡೆದ ಲಕ್ಷ್ಮಣ್ ಹೊಗೆಬಂಡಿ 50,000 ರು., ದ್ವಿತೀಯ ಸ್ಥಾನ ಪಡೆದ ಆನಂದ್ 40,000 ರು. ಮತ್ತು ತೃತೀಯ ಸ್ಥಾನ ಪಡೆದ ಸುಂಚಿತ್ 30,000 ರು. ಬಹುಮಾನ ಪಡೆದರು. ಲಕ್ಷ್ಮಣ್ 2012 ಮತ್ತು 2014ರಲ್ಲಿ ನಡೆದ ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.

ಈ ಸ್ಪರ್ಧೆಯನ್ನು ಪಶುಸಂಗೋಪನೆ ಮಾಡುವವರನ್ನು ಪ್ರೋತ್ಸಾಹಿಸಲು ಆಯೋಜಿಸಿದ್ದು, ಪಶುಸಂಗೋಪನೆ ಇಲಾಖೆಯ 25 ಮಂದಿ ತಾಂತ್ರಿಕ ಬೆಂಬಲ ನೀಡಿದರು.

Leave a Reply

comments

Related Articles

error: