ಮೈಸೂರು

ನವರಾತ್ರಿ ರಂಗೋತ್ಸವದಲ್ಲಿ ಎಚ್.ಎಂ. ರಂಗಯ್ಯ ಅವರಿಗೆ ಸನ್ಮಾನ

ತುಮಕೂರಿನ ರಂಗಭೂಮಿ ಕಲಾವಿದ, ನಿರ್ದೇಶಕರಾದ ಎಚ್.ಎಮ್. ರಂಗಯ್ಯ ಅವರನ್ನು ರಂಗಾಯಣದ ಭೂಮಿಗೀತದಲ್ಲಿ ನಡೆದ ನವರಾತ್ರಿ  ರಂಗೋತ್ಸವದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಂಗಯ್ಯ ಅವರು, ಬಿ.ವಿ. ಕಾರಂತ್ ಅವರೊಂದಿಗಿನ ಒಡನಾಟ ಮತ್ತು ರಂಗಭೂಮಿಯಲ್ಲಿ ತಾವು ಕಳೆದ ಕ್ಷಣಗಳನ್ನು ಸ್ಮರಿಸಿಕೊಂಡರು. “ರಂಗಭೂಮಿಯ ಹೆಸರಾಂತ ಕಲಾವಿದರಾದ ನಾ.ರತ್ನ ಮತ್ತು ಪ್ರೊ.ಗೋವಿಂದ ರಾವ್ ಅವರಿಂದ ಸನ್ಮಾನ ಸ್ವೀಕರಿಸಿರುವುದು ಖುಷಿ ತಂದಿದೆ” ಎಂದು ಹೇಳಿದರು.

“1 ಲಕ್ಷ ರು. ಮತ್ತು 20 ಗ್ರಾಂ ಚಿನ್ನದ ಪದಕದೊಂದಿಗೆ ಮುಖ್ಯಮಂತ್ರಿಗಳು ನನಗೆ ರಾಷ್ಟ್ರೀಯ ಪ್ರಶಸ್ತಿ ವಿತರಿಸಿದಾಗ ನನಗೆ ಅಷ್ಟು ಖುಷಿಯಾಗಿರಲಿಲ್ಲ. ಆದರೆ, ನನ್ನ ರಂಗಭೂಮಿಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿದ್ದಾರೆ ಎಂದು ಗೊತ್ತಾದಾಗ ಬಹಳ ಸಂತೋಷವಾಗಿತ್ತು” ಎಂದು ಹೇಳಿದರು.

ಹಿರಿಯ ರಂಗಭೂಮಿ ಕಲಾವಿದ ನಾ.ರತ್ನ, ಪ್ರೊ. ಜಿ.ಕೆ. ಗೋವಿಂದರಾವ್, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಯೋಜಕ ವಿನಾಯಕ್ ಭಟ್ ಹಸನಗಿ ಮತ್ತು ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

 

 

Leave a Reply

comments

Related Articles

error: