ಮೈಸೂರು

ಫೈನಾನ್ಸ್ ಕಂಪನಿಗೆ ಹಣ ಪಾವತಿಸದೇ ಇರುವುದನ್ನು ಪ್ರಶ್ನಿಸಿದ್ದಕ್ಕೆ ಕಾರು ಜಖಂ : ದೂರು

ಮೈಸೂರು, ಜೂ.13:- ಫೈನಾನ್ಸ್ ಕಂಪನಿಗೆ ಸರಿಯಾಗಿ ಹಣ ಪಾವತಿಸದೇ ಇರುವುದನ್ನು ಪ್ರಶ್ನಿಸಿದ್ದಕ್ಕೆ  ಕಾರಿನ ಗಾಜನ್ನು ಒಡೆದು ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ನರಸಿಂಹರಾಜ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿದ್ದಪ್ಪಾಜಿ ಎಂಬವರೇ ದೂರು ನೀಡಿದವರಾಗಿದ್ದಾರೆ.  ಕೆ ಆರ್ ಮಿಲ್ ಕಾಲೋನಿ ರವಿ ಮತ್ತು ಆತನ ಮಕ್ಕಳಿಗೆ ಫೈನಾನ್ಸ್ ಹಣ ಕೊಡಿಸಿ ಜಾಮೀನು ಕೊಟ್ಟಿದ್ದು,  ರವಿ ಮತ್ತು ಆತನ ಮಕ್ಕಳು ಸರಿಯಾಗಿ ಹಣ ಕಟ್ಟದೇ ಇದ್ದುದರಿಂದ ಅವರ ವಾಹನ ಮಹೀಂದ್ರ ಮ್ಯಾಕ್ಸಿಮಾ ಅನ್ನು ಫೈನಾನ್ಸ್ ಕಂಪನಿಗೆ ಕೊಡಿಸುತ್ತೇನೆಂದು ಹೇಳಲಾಗಿತ್ತು,   ಜೂ.10 ರಂದು ರಾತ್ರಿ ಸುಮಾರು 10.10 ಕ್ಕೆ  ಮನೆ ಬಳಿ ಬಂದು ರಂಜು, ಮದನ್, ರವಿ, ಮತ್ತು ಹರೀಶ ಏಕಾ ಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರ್ ನಂ.ಕೆಎ-09 ಎಂ.ಬಿ-1552ಗೆ ಕೈ ನಿಂದ ಹೊಡೆದು ಜಖಂಗೊಳಿಸಿ, ಪಾಟ್ ಗಳನ್ನು ಸಹ ಒಡೆದು ಸುಮಾರು 10,000 ರೂ. ನಷ್ಟವನ್ನುಂಟು ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: