ಮೈಸೂರು

ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನ

ಮೈಸೂರಿನ ಪುರಭವನದಲ್ಲಿ ಗುರುವಾರ ಸಂಜೆ ರಂಗ ಚಾವಡಿ ಆಶ್ರಯದ ಕಾಕೋಳು ಸರೋಜರಾವ್ ವಿರಚಿತ ಶ್ರೀಕೃಷ್ಣ ದೇವರಾಯ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.

ಬಿ.ಎಂ.ರಾಮಚಂದ್ರ ಅವರ ನಿರ್ದೇಶನದಲ್ಲಿ ಶ್ರೀಕೃಷ್ಣದೇವರಾಯ ನಾಟಕ ಅತ್ಯದ್ಭುತವಾಗಿ ಮೂಡಿಬಂತು. ಕೃಷ್ಣದೇವರಾಯನಾಗಿ ಕಾಣಿಸಿಕೊಂಡ ರಂಗಸ್ವಾಮಿ ಅಮೋಘವಾಗಿ ನಟಿಸಿ ಜನಮನ ಸೂರೆಗೊಂಡರು. ಸಹಕಲಾವಿದರಾದ ಮೋಹನದಾಸ ತಿಮ್ಮರಸು ಪಾತ್ರ ಹಾಗೂ ನಾಗಭೂಷಣ್ ಅಚ್ಯುತರಾಯನ ಪಾತ್ರದಲ್ಲಿ ಮಿಂಚಿದರು. ಪಾಟೀಲ್ ಅವರ ಹಿನ್ನೆಲೆ ಸಂಗೀತ, ಮೋಹನ್ ರಾಜ್ ಅವರ ಬೆಳಕಿನ ವಿನ್ಯಾಸ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು. ದಸರಾ ಮಹೋತ್ಸವ- 2016ರ ಉಪ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

Leave a Reply

comments

Related Articles

error: